ಲೇಖಕಿ ಸಬಿತಾ ಬನ್ನಾಡಿ ಅವರ ಲೇಖನಗಳ ಸಂಕಲನ-ಗೂಡು ಮತ್ತು ಆಕಾಶ. ವಿವಿಧ ವಸ್ತು ವೈವಿಧ್ಯತೆಯ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿತ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ. ನಿರೂಪಣಾ ಶೈಲಿಯೂ, ವೈಚಾರಿಕ ಗಟ್ಟಿತನವೂ ಕೃತಿಯನ್ನು ಓದಲು ಅರ್ಹವಾಗಿಸಿವೆ. ಲೇಖಕರು ತಮ್ಮ ಅನುಭವಗಳನ್ನು ಅಕ್ಷರದಲ್ಲಿಳಿಸಿ, ಅವುಗಳಿಗೆ ಉತ್ತಮ ಸಾಹಿತ್ಯಕ ಸ್ಪರ್ಶ ನೀಡಿರುವುದನ್ನು ಕಾಣಬಹುದು.
ವಿಮರ್ಶೆ, ಕವಿತೆ ಮತ್ತು ಅಂಕಣ ಬರಹಗಳನ್ನು ಕಳೆದ ಮೂವತ್ತು ವರ್ಷಗಳಿಂದ ಬರೆಯುತ್ತಿರುವ ಸಬಿತಾ ಬನ್ನಾಡಿಯವರು ಸಮಗ್ರ ವಚನ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು, “ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿಯ ಅಂತರ್‍ಸಂಬಂಧಗಳು” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಮಾಡಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ(ಚಿನ್ನದ ಪದಕ) ಪಡೆದ ಇವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ತರೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಇವರು ಪ್ರಸ್ತುತ ಪ್ರಾಧ್ಯಾಪಕಿ ಮತ್ತು ವಿಭಾಗ ಮುಖ್ಯಸ್ಥರಾಗಿ ...
READ MORE