ಭಾರತದಲ್ಲಿ ಸಮಾಜ ಕಾರ್ಯ-ಹಿನ್ನಲೆ ಮುನ್ನೋಟ

Author : ಎಸ್‌.ಆರ್‌. ರಾಮಸ್ವಾಮಿ

Pages 160

₹ 25.00




Year of Publication: 1992
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಭಾರತದಲ್ಲಿ ಸಮಾಜ ಕಾರ್ಯ-ಹಿನ್ನಲೆ ಮುನ್ನೋಟ ವೈಚಾರಿಕ ಬರಹ ಕೃತಿಯನ್ನು ಲೇಖಕ ಎಸ್.ಆರ್.‌ ರಾಮಸ್ವಾಮಿ ರಚಿಸಿದ್ದಾರೆ. ಸಮಾಜಕಾರ್ಯದ ತಾತ್ತ್ವಿಕ ಚಿಂತನೆ, ನಡೆದು ಬಂದ ದಾರಿ, ಸಾಮಾಜಿಕ ಕಾರ್ಯಕ್ಕೆ ಇರಬೇಕಾದ ಸ್ಥಾನ, ಸಾಮಾಜಿಕ ಕಾರ್ಯಕರ್ತರಾಗಬಯಸುವವರಿಗೆ ಇರಬೇಕಾದ ಮನೋಧರ್ಮ, ಅವರು ಅನುಸರಿಸಬಹುದಾದ ವಿಧಾನಗಳು ಮೊದಲಾದ ವಿಷಯಗಳನ್ನು ಕುರಿತ ದೇಶದ ಹಲವಾರು ಗಣ್ಯರ ವಿಶ್ಲೇಷಣೆ ಈ ಗ್ರಂಥದಲ್ಲಿದೆ. ಸೇವಾಕ್ಷೇತ್ರದ ಇತ್ತೀಚಿನ ಹಲವು ಮಹತ್ತರ ಸಾಧನೆಗಳ ಪರಿಚಯವೂ ಸಹ ಈ ಪುಸ್ತಕದಲ್ಲಿದೆ.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books