ಗದಗದ ಲಡಾಯಿ ಪ್ರಕಾಶನವು ’ಲಿಂಗಾಯತ ದರ್ಶನ ಮಾಲೆಯಡಿ’ ಪ್ರಕಟಿಸಿರುವ ಪುಸ್ತಕ ’ಲಿಂಗಾಯತರು ಹಿಂದೂಗಳಲ್ಲ’. ಲಿಂಗಾಯತ ಧರ್ಮ ಹಿಂದೆ ಹೇಗಿತ್ತು ಈಗ ಹೇಗಿದೆ ಎಂಬುದನ್ನು ಕೃತಿ ವಿವರಿಸುತ್ತದೆ. ಡಾ. ಎನ್. ಜಿ. ಮಹಾದೇವಪ್ಪ ಗ್ರಂಥದ ಲೇಖಕರು. ಲಿಂಗಾಯತ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಇರುವ ವ್ಯತ್ಯಾಸಗಳನ್ನು ಅವರು ತಮ್ಮ ಆಳ ಅಧ್ಯಯನದ ಮೂಲಕ ಗುರುತಿಸಿದ್ದಾರೆ. ಅಲ್ಲದೆ ವೀರಶೈವರಿಗೂ ಲಿಂಗಾಯತರಿಗೂ ಇರುವ ಭಿನ್ನತೆಯನ್ನೂ ಕೃತಿ ಗುರುತಿಸುತ್ತದೆ. ವೀರಶೈವ ಹಿಂದೂಧರ್ಮದ ಶಾಖೆಯಾದರೆ, ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ ಎಂಬುದು ಲೇಖಕರ ನಿಲುವು. ಅದಕ್ಕೆ ಸಾಕಷ್ಟು ಉದಾಹರಣೆಗಳನ್ನೂ ಅವರು ನೀಡುತ್ತಾರೆ.
ಕೃತಿ ಆರು ಅಧ್ಯಾಯಗಳನ್ನು ಹೊಂದಿದ್ದು ಮೊದಲನೆಯದು ಲಿಂಗಾಯತ ಧರ್ಮಕ್ಕೆ ಎದುರಾಗಿರುವ ಅಪಾಯ ಮತ್ತು ಅಪಚಾರವನ್ನು ವಿವರಿಸುತ್ತದೆ. ಎರಡನೇ ಅಧ್ಯಾಯ ವೀರಶೈವ ಮತ್ತು ಲಿಂಗಾಯತ ಧರ್ಮದ ನಡುವಿನ ವ್ಯತ್ಯಾಸಗಳನ್ನು ಹೇಳುತ್ತದೆ. ಮೂರನೇ ಅಧ್ಯಾಯದಲ್ಲಿ ವೀರಶೈವದ ವೇದಮೂಲ ಮತ್ತು ಲಿಂಗಾಯತದ ವಚನಮೂಲವನ್ನು ತಿಳಿಸಲಾಗಿದೆ. ಬಸವಣ್ಣ ವಿರೋಧಿಸಿದ ಜಾತಿ ತಾರತಮ್ಯದ ಉಲ್ಲೇಖ, ಬಸವೋತ್ತರ ಶರಣರ ಸ್ತ್ರೀ ಧೋರಣೆ ಇತ್ಯಾದಿ ವಿಚಾರಗಳು ಮುಂದಿನ ಅಧ್ಯಾಯಗಳಲ್ಲಿವೆ.
ಡಾ. ಎನ್. ಜಿ. ಮಹಾದೇವಪ್ಪ ಅವರು ಲೇಖಕರು, ಚಿಂತಕರು. ಮೂಲತಃ ಚಿಕ್ಕಮಗಳೂರಿನವರು.ಲಿಂಗಾಯತ ದರ್ಶನ ಮಾಸಿಕ ಪತ್ರಿಕೆಯ ಸಂಪಾದಕರು. ಕೃತಿಗಳು: ಲಿಂಗಾಯತರು ಹಿಂದೂಗಳಲ್ಲ (ಲೇಖನಗಳ ಸಂಗ್ರಹ ಕೃತಿ), ವಚನ ಪರಿಭಾಷಾಕೋಶ (ವಚನಗಳ ಸಂಗ್ರಹ ಕೃತಿ), ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು (ವಿಶ್ಲೇಷಣೆ) ಪ್ರಶಸ್ತಿ-ಪುರಸ್ಕಾರಗಳು:ಬಸವಕಲ್ಯಾಣದ ವಿಶ್ವ ಬಸವಧರ್ಮ ವಿಶ್ವಸ್ಥ ಸಂಸ್ಥೆಯಿಂದ ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ ಲಭಿಸಿದೆ. ...
READ MORE