ಪುರಾಣದ ಮೂಲಕ ಬಸವಣ್ಣನವರನ್ನು ನೋಡುವ ಸಮೂಹದತ್ತ ಮೊದಲಿನಿಂದಲೂ ತೀವ್ರ ಆಕ್ಷೇಪಿಸುತ್ತಾ ಬಂದಿರುವ ಪಂಡಿತ ಚನ್ನಪ್ಪ ಎರೇಸೀಮೆ, ಬಸವಣ್ಣನವರನ್ನು ಅರ್ಥೈಸಿಕೊಳ್ಳಲು ಅವರ ವಚನಗಳ ಬೋಧೆಯೇ ಆಧಾರವಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಬಸವಣ್ಣನವರ ಅದ್ಭುತ ವೈಚಾರಿಕ ಶಕ್ತಿ ಕುರಿತು ತಾವು ಗೌರವಯುತವಾಗಿ ಕೃತಿಯಲ್ಲಿ ಪರಿಚಯಿಸಿದ್ದಾಗಿ ಲೇಖಕರು ಹೇಳಿದ್ದಾರೆ.
12ನೇ ಶತಮಾನದ ದಕ್ಷಿಣ ಭಾರತದ ಸ್ಥಿತಿಗತಿಗಳು, ಬಸವಣ್ಣನವರ ಜನನ, ಬಸವಣ್ಣನವರ ಇನ್ನೊಂದು ಮುಖ, ಬಸವಣ್ಣನವರ ಕ್ರಾಂತಿಗೆ ಆದರ್ಶ ಯಾವುದು?, ಬಸವಣ್ಣನವರ ಮಹಾಕ್ರಾಂತಿಯ ಕೂಗಿಗೆ ಸಮಸ್ತ ಭಾರತವೇ ದನಿಗೂಡಿಸಿತೆ?, ಬಸವಣ್ಣನವರನ್ನು ಯಾವ ದೃಷ್ಟಿಕೋನದಿಂದ ನೋಡಬೇಕು? ಹೀಗೆ ಒಟ್ಟು 14 ಶೀರ್ಷಿಕೆಯ ಲೇಖನಗಳ ಮೂಲಕ ಲೇಖಕರು ತಮ್ಮ ವಿಚಾರಗಳನ್ನು ಸಮರ್ಥಿಸಿಕೊಂಡ ವಿದ್ವತ್ ಪೂರ್ಣ ಕೃತಿ ಇದು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...
READ MORE