ಅವತಾರಗಳು ಎಂಬ ಹೆಸರು ದಶಾವತಾರಗಳನ್ನು ನೆನಪಿಗೆ ತರುತ್ತದೆ. ಆದರೆ ಜನಪದ ದೇವತೆಗಳ ಅವತಾರಗಳು ಸಾವಿರಾರು. ಇಲ್ಲಿರುವ ವೈವಿಧ್ಯತೆ ಶಿಷ್ಟದೇವರುಗಳಲ್ಲಿ ಕಂಡು ಬರುವುದಿಲ್ಲ. ಅವತಾರಗಳು ಎಂದರೆ ಗ್ರಾಮೀಣ ಪ್ರದೇಶದಲ್ಲಿ ಜನ ಭಿನ್ನವಾಗಿ ಕಾಣಿಸಿಕೊಳ್ಳುವ ರೀತಿ. ಯಾರಾದರೂ ತರಲೆ ಮಾಡಿದರೆ “ಏನು ನಿನ್ನ ಅವತಾರ” ಎನ್ನುತ್ತಾರೆ. “ಅವತಾರ ಮಾಡಬೇಡ, ನಿನ್ನ ಅವತಾರ ನನ್ನ ಹತ್ತಿರ ನಡೆಯೋದಿಲ್ಲ” ಎನ್ನುತ್ತಾರೆ. ಅವತಾರವೆಂದರೆ ಅಸಹಜ ವಾದದ್ದು, ತನ್ನ ಅಸಹಜತನದಿಂದ ಆಶ್ಚರ್ಯವನ್ನು ಉಂಟುಮಾಡುವಂಥದ್ದು ಎಂದು ಭಾವಿಸಲಾಗಿದೆ. ಈ ಪುಸ್ತಕವೂ ಸೂಚಿಸಲು ಪ್ರಯತ್ನಿಸುವುದು ಗ್ರಾಮಜೀವನದಲ್ಲಿ ಮೇಲಿಂದ ಮೇಲೆ ಕಾಣಿಸುವ ದೇವರ ಮತ್ತು ಈ ದೇವರಿಗೆ ಗಂಟುಬಿದ್ದ ಭಕ್ತರ ಅವತಾರಗಳನ್ನು, ದೂರನಿಂತು ನೋಡುವವರಿಗೆ ಇದು ಮನರಂಜನೆಯನ್ನೇನೋ ಒದಗಿಸೀತು, ಆದರೆ ಇದರ ಹಿಂದೆ ಮೌಡ್ಯ, ಅಜ್ಞಾನಗಳಿವೆ ಎಂಬುದನ್ನು ಮರೆಯುವಂತಿಲ್ಲ. ಜೊತೆಗೆ ಬಹಳ ಸಲ, ದೇವರ ಅವತಾರಗಳ ಹಿಂದೆ ಜನರ ಅಜ್ಞಾನವನ್ನು ಬಳಸಿಕೊಳ್ಳುವ ಯಾವನಾದರೊಬ್ಬನ ಜಾಣತನವೂ ಗೋಚರಿಸುತ್ತದೆ.
ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...
READ MORE