ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಸಿದ್ಧಾರ್ಥ ಗೌತಮ ಬುದ್ಧನಾದ ಪರಿ ಮತ್ತು ಇತರೆ ಬೆಳಕಿನ ಕಥೆಗಳು. ಬುದ್ಧನ ಚಿಂತನೆಯಲ್ಲಿ ರೂಪುಗೊಂಡ ಅಮರ ಜಾತಕ ಕಥೆಗಳು ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ.ಇಲ್ಲಿವೆ. 25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟಿಸಲಾಗಿದೆ. ಈ ಕೃತಿಯಲ್ಲಿನ 27 ಶೀರ್ಷಿಕೆಗಳು ಹೀಗಿವೆ ; ಮಹಾಮಾತೆಯ ಕೊನೆಯ ಕ್ಷಣಗಳು, ಸಿದ್ಧಾರ್ಥ ಗೌತಮನ ಬಾಲ್ಯ, ಸಿದ್ಧಾರ್ಥ ಗೌತಮನ ಮನವೇಕೆ ಕಲಕಿತು, ಸ್ವಯಂವರದಲ್ಲಿ ಸಿದ್ದಾರ್ಥ ವರಿಸಿದ ಯಶೋಧರೆಯ, ಸುರಸುಂದರಿಯರ ನಡುವೆ ಸಿದ್ದಾರ್ಥ ಗೌತಮ, ರೋಹಿಣಿ ನದಿಗಾಗಿ ಯುದ್ಧ ಶಾಂತಿಯತ್ತ ಸಿದ್ಧಾರ್ಥ, ಸಿದ್ಧಾರ್ಥ ಗೌತಮನ ಕೊನೆಯ ಮುತ್ತು, ತೊರೆದನಾ ಸಿದ್ದಾರ್ಥ ಕಪಿಲವಸ್ತುವ ಪರಿವ್ರಾಜಕನಾಗಿ, ಚೆನ್ನ ದುಃಖಿಸದಿರು ಅಗಲಿಕೆಯೇ ಸತ್ಯವೆಂದ ಸಿದ್ಧಾರ್ಥ, ಮತ್ತೆ ರೋದಿಸಿತು ಅರಮನೆಯು ಚೆನ್ನನ ಕಂಡು, ನಿನ್ನರ್ಧ ರಾಜ್ಯಕ್ಕೂ ಮಿಗಿಲು ಅರಿವೆಂದ ಸಿದ್ದಾರ್ಥ, ಸಮಸ್ಯೆಗೊಂದು ಹೊಸ ನೋಟ, ಜ್ಞಾನೋದಯವೆಂಬ ಅಮೃತತ್ವದ ಅನ್ವೇಷಣೆಯತ್ತ, ಸಿದ್ಧಾರ್ಥ ಗೌತಮ ಬುದ್ಧನಾದ ಪರಿ, ಜ್ಞಾನೋದಯದ ಬಳಿಕ ಏಳು ಸಪ್ತಾಹಗಳ ಚಿಂತನ, ತುಮುಲದಲ್ಲಿ ಜ್ಞಾನೋದಯಗೊಂಡ ಬುದ್ಧ, ಬುದ್ಧನ ಪ್ರಥಮ ಉಪದೇಶ, ಅತಿಯಾದೊಡೆಲ್ಲವೂ ಮಿತಿಮೀರುವುದು, ಅರಿವೂ ಅಗ್ನಿಪೂಜೆಗೂ ಮಿಗಿಲೆಂದ ಬುದ್ಧ, ಬುದ್ಧಂಗೆ ಶರಣಾದರಾ ಧರ್ಮಸೇನಾನಿಗಳು, ನಿನ್ನಿಂದ ನನ್ನ ಮಹಾದಾಸೆ ಈಡೇರಿತೆಂದ ಬಿಂಬಸಾರ, ಬುದ್ಧನೆಂದ ಅನಾಥಪಿಂಡಿಕ ಅಂಟದಿರು ಯಾವುದಕ್ಕೂ, ಪಸೇಜಿತ ಮನದ ಕರೆಗೆ ಓಗೊಡೆಂದ ಬುದ್ಧ, ನಿನ್ನ ಸೇವೆ ಸರ್ವರಿಗೂ ಹಿತತರಲೆಂದ ಬುದ್ಧ, ಬುದ್ಧ ನಾನಿನ್ನು ಹಗಲುಗನಸು ಕಾಣಲಾರೆ, ಬಾ ಸೋಪಕ ನನ್ನ ತೊಡೆ ನಿನಗಾಗೆಂದ ಬುದ್ಧ, ಹೋಗಿ ಬಾ ರಟ್ಟಪಾಲ ನೀ ಮುಕ್ತನೆಂದ ಬುದ್ಧ. ಇವೆಲ್ಲವುಗಳು ಇಲ್ಲಿನ ಜೀವಾಳಗಳಾಗಿವೆ.
©2024 Book Brahma Private Limited.