ಪಾಕಿಸ್ತಾನ ಅಧ್ಯಕ್ಷೆ ಬೆನ್ ಜೀರ್ ಭುಟ್ಟೋ ಅವರ ವ್ಯಕ್ತಿಗತ ಜೀವನ ಸೇರಿದಂತೆ ಆಡಳಿತವು ಸಂಚುಗಾರರಿಂದ ನಲುಗಿ ಹೋಗಿತ್ತು. ಇದನ್ನೇ ಲೇಖಕಿ ಗೌರಿ ಲಂಕೇಶ್ ಅವರು ಬೆನ್ ಜೀರ್ ಅವರನ್ನು ಗಿಳಿಯಾಗಿಸಿ, ವ್ಯವಸ್ಥೆಯ ಕ್ರೌರ್ಯ ಸೂಚಕವಾಗಿ ಗಿಡುಗಗಳಿಗೆ ಹೋಲಿಸಿ ಬರೆದ ಕೃತಿ-ಗಿಡುಗಗಳಿಗೆ ಬಲಿಯಾದ ಗಿಳಿ ಬೆನ್ ಜೀರ್. ಬರೆಹ ಶೈಲಿಯು ಹತ್ತು ಹಲವು ಚಿಂತನೆಗಳಿಗೆ ಪ್ರೇರಣೆಯಂತಿದ್ದು, ಲೇಖಕಿಯ ವಿಶ್ಲೇಷಣೆಯು ಅವರ ಅಪಾರ ಓದಿಗೆ ಕನ್ನಡಿ ಹಿಡಿಯುತ್ತದೆ.
ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರು 1962 ಜನವರಿ 29 ರಂದು ಜನಿಸಿದರು. ಗೌರಿ ಲಂಕೇಶ್ ಪತ್ರಿಕೆ' ವಾರ ಪತ್ರಿಕೆ ನಡೆಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸಿದ್ಧ ಅಂಕಣಕಾರರು. 'ಆವರಣ' ಎಂಬ ವಿಕೃತಿ-ವಿಮರ್ಶೆ (ಸಂಪಾದಿತ), ಇದ್ರೀಸ್ ಶ್ರೀರವರ ದರವೇಶಿ ಕತೆಗಳು (ಅನುವಾದ), ಗಿಡುಗಗಳಿಗೆ ಬಲಿಯಾದ ಗಿಳಿ ಬೇನ್‌ಜೀರ್ (ಜೀವನಚಿತ್ರ), ಹಲವಾರು ಫ್ರೆಂಚ್, ಹಿಂದಿ ಇಂಗ್ಲಿಷ್ ಭಾಷೆಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ, ಲಂಕೇಶ್ ವಾರಪತ್ರಿಕೆಯ ಸಂಪಾದಕರು ಮತ್ತು ಗೈಡ್' ಮಾಸಪತ್ರಿಕೆಯ ಪ್ರಕಾಶಕರು, ಕರ್ನಾಟಕ ಕೋಮು ಸೌಹಾರ್ದ ...
READ MORE