ಅಭಿವೃದ್ಧಿಯ ನೆಪದಲ್ಲಿ ಭೂಮಿ ಹಾಗೂ ಜನಜೀವನವನ್ನು ಹದಗೆಡಿಸುತ್ತಿರುವ ವ್ಯವಸ್ಥೆ ವಿರುದ್ಧ ಲೇಖಕ ಡಾ. ಆರ್. ವಿ. ಚಂದ್ರಶೇಖರ ರಾಮೇನಹಳ್ಳಿ ಅವರು ಅಂಕಿ-ಅಂಶಗಳ ಸಮೇತ ಬರೆದ ಕಳಕಳಿಯ ವಿಚಾರಗಳು ಈ ಕೃತಿಯಲ್ಲಿ 10 ಅಧ್ಯಾಯಗಳ ಮೂಲಕ ಲೇಖನಗಳ ರೂಪ ಪಡೆದಿವೆ. ವಿಶೇಷ ಆರ್ಥಿಕ ವಲಯಗಳ ಉಗಮ -ಬೆಳವಣಿಗೆ, ಭಾರತದಲ್ಲಿ ವಿಶೇಷ ಆರ್ಥಿಕ ವಲಯ ಕಾಯ್ದೆ, ಕರ್ನಾಟಕದಲ್ಲಿ ವಿಶೇಷ ಆರ್ಥಿಕ ವಲಯಗಳು, ಟೌನ್ ಶಿಪ್; ರೈತ ಕಾರ್ಮೀಕರನ್ನು ಮುಳುಗಿಸಲಿರುವ ಟೈಟಾನಿಕ್, ಕರ್ನಾಟಕದಲ್ಲಿಉಷ್ಣ ವಿದ್ಯುತ್ ಸ್ಥಾವರಗಳು, ಗ್ರೇಟರ್ ಬೆಂಗಳೂರು, ಕೈಗಾರಿಕ ಅಭಿವೃದ್ಧಿ ಎಂಬ ಆಕರ್ಷಕ ದ್ರೋಹ, ರೈತರ ಕೊರಳಿಗೆ ಅಭಿವೃದ್ಧಿಯ ಕೊಡಲಿ, ಕರ್ನಾಟಕದಲ್ಲಿ ಏನ್ ನಡಿತಾ ಇರೋದು? ಹಾಗೂ ಮುಂದೇನು? ಎಂದು ಪ್ರಶ್ನಿಸುವ ಅಧ್ಯಾಯಗಳಿದ್ದು, ವಿಶೇಷ ಆರ್ಥಿಕ ವಲಯಗಳಿಂದ ಆಗುವ ಸಮಸ್ಯೆ ಹಾಗೂ ಪರಿಹಾರದತ್ತ ಗಮನ ಸೆಳೆದಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಮೇನಹಳ್ಳಿ ಗ್ರಾಮದ ಡಾ. ಆರ್.ವಿ. ಚಂದ್ರಶೇಖರ ರಾಮೇನಹಳ್ಳಿ ಅವರು ಶಿವಾರಪಟ್ಟಣದಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪೂರೈಸಿ, ಮಾಲೂರಿನಲ್ಲಿ ಪದವಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದು, ಜಾಗತೀಕರಣ ಮತ್ತು ಸಮಾಜ, ಭಾರತದ ಆರ್ಥಿಕತೆ ಮತ್ತು ವಿಶೇಷ ವಲಯಗಳು, ಭೂಮಿ ಮತ್ತು ಬದುಕು, ಅಭಿವೃದ್ಧಿ ಎಂಬ ಅವನತಿ, ಅಭಿವೃದ್ಧಿ ಕೊಡಲಿಗೆ ಒಕ್ಕಲುತನದ ಕೊರಳು, ಡಿಟೆಕ್ಟೀವ್ ಡೆವೆಲಪ್ ಮೆಂಟ್, ಸಮಕಾಲೀನ ಮಹಿಳೆ ಮತ್ತು ಆರೋಗ್ಯ-ಒಂದು ಸಮಾಜಶಾಸ್ತ್ರೀಯ ಚಿಂತನೆ, ...
READ MORE