ಚಾಣಕ್ಯ ನೀತಿ ಕೃತಿಯು ಚಾಣಕ್ಯನ ನೀತಿ ಗ್ರಂಥಗಳ ಒಂದು ಸಂಕಲನ. ಚಾಣ್ಯಕ್ಯನು ರಚಿಸಿದ ಗ್ರಂಥಗಳಲ್ಲಿ ಮುಖ್ಯವಾದುದೆಂದರೆ ಅರ್ಥಶಾಸ್ತ್ರ. ಆರ್ಥಿಕ ವಿಚಾರಗಳು ಹಾಗೂ ರಾಜ್ಯಾಡಳಿತ ನಡೆಸುವುದರ ಬಗೆಗಿನ ಅದ್ಭುತ ವಿಶ್ವಕೋಶವಿದು. ಅರ್ಥಶಾಸ್ತ್ರವಲ್ಲದೇ, ಚಾಣಕ್ಯನು ಅನೇಕ ನೀತಿಯುಕ್ತ ಸುಭಾಷಿತ ಗ್ರಂಥಗಳನ್ನು ರಚಿಸಿದ್ದಾರೆ. ಈ ಸಂಪುಟದಲ್ಲಿ ವೃದ್ಧ ಚಾಣಕ್ಯ, ಚಾಣಕ್ಯ ನೀತಿಶಾಸ್ತ್ರ ಹಾಗೂ ಚಾಣಕ್ಯ ಸಾರಸಂಗ್ರಹ ಗ್ರಂಥಗಳ ಮಾಹಿತಿ ಇದೆ.
ಬೆಂಗಳೂರಿನ ಎಂ.ಎಸ್.ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ ಪೂರೈಸಿದ ಡಾ. ಬಿ. ಆರ್ ಸುಹಾಸ್, 1976 ಜೂ. 26 ರಂದು ಬೆಂಗಳೂರಿನಲ್ಲಿ ಹುಟ್ಟಿದ್ದು. ಸದ್ಯ ನಂದಿನಿ ಲೇಔಟ್ ನಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿದ್ದಾರೆ. ಪ್ರವೃತ್ತಿಯಿಂದ ಬರಹಗಾರರು, ಗಾಯಕರು, ಛಾಯಾಚಿತ್ರಗ್ರಾಹಕರೂ ಆಗಿದ್ದಾರೆ. ಚರ್ಮದ ಕಾಯಿಲೆಗಳು, ಕಥಾಕೋಶ, ಆಯುರ್ವೇದ ಸಂಪೂರ್ಣ ಮಾರ್ಗದರ್ಶಿ, ಝೆನ್ ಕಥೆಗಳು, ಭಾರತದ ವನ್ಯಧಾಮಗಳು, ಚಾಣಕ್ಯ ನೀತಿ, ಕಿರಿಯ ಕಥಾ ಸರಿತ್ಸಾಗರ, ವಿಲಿಯಂ ಹಾರ್ವೆ, ಲೂಯಿಸ್ ಪಾಶ್ಚರ್ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...
READ MORE