ತೀವ್ರತರ ಹಾಗೂ ಪ್ರತಿಕ್ರಿಯಾತ್ಮಕ ಪ್ರಕ್ರಿಯೆ ಗಳಿಂದ ಕೂಡಿದ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯವನ್ನು ಅದರ ವಿಭಿನ್ನ ಧೋರಣೆಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕ ಅವಲೋಕನ ಮಾಡುವ ಉದ್ದೇಶದಿಂದ ಆಕಾಶವಾಣಿ ಗುಲ್ಬರ್ಗ ಕೇಂದ್ರವು 2001ರ ಅಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು” ಎಂಬ ಏಳು ದಿನಗಳ ವಿಚಾರ ಸಂಕಿರಣವನ್ನು ಹಮ್ಮಿಕೊಂಡು ನೇರಪ್ರಸಾರ ಮಾಡಿತು.
ಈ ವಿಚಾರ ಸಂಕಿರಣದಲ್ಲಿ ಮಂಡಿತವಾದ ಕನ್ನಡದ ಹಿರಿಯ ವಿದ್ವಾಂಸರ ಉಪನ್ಯಾಸಗಳನ್ನೇ ಪ್ರಬಂಧಗಳ ರೂಪದಲ್ಲಿ ಸಿದ್ದಪಡಿಸಿ, 2002ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗ ದೊಂದಿಗೆ ಪ್ರಕಟಿಸಲಾದ ಗ್ರಂಥವೇ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು".
ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನುವಿವಿಧ ಘಟ್ಟಗಳಲ್ಲಿ ವಿಂಗಡಿಸಿ ಕಟ್ಟಕೊಡುವ ಈ ಕೃತಿಯು ಕನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಉಪಯುಕ್ತ.
http://kanaja.in/ebook/images/PDF/%E0%B2%87%E0%B2%AA%E0%B3%8D%E0%B2%AA%E0%B2%A4%E0%B3%8D%E0%B2%A4%E0%B2%A8%E0%B3%86%E0%B2%AF_%E0%B2%B6%E0%B2%A4%E0%B2%AE%E0%B2%BE%E0%B2%A8%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF_%E0%B2%98%E0%B2%9F%E0%B3%8D%E0%B2%9F%E0%B2%97%E0%B2%B3%E0%B3%81.pdf
©2024 Book Brahma Private Limited.