ಮನು vs ಅಂಬೇಡ್ಕರ್‌

Author : ಜಿ.ಕೆ. ಗೋವಿಂದರಾವ್

Pages 56

₹ 30.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಕಲಾವಿದ, ಲೇಖಕ, ಚಿಂತಕರೂ ಆಗಿರುವ ಜಿ.ಕೆ.ಗೋವಿಂದರಾವ್ ಅವರ ವೈಚಾರಿಕ ಕೃತಿ ‘ಮನು V/s ಅಂಬೇಡ್ಕರ್’. ಉಡುಪಿಯ ಪೇಜಾವರಮಠದ ವಿಶ್ವೇಶತೀರ್ಥರಿಗೆ ಬರೆದ ಬಹಿರಂಗ ಪತ್ರ ಇದು. ‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ತಾವು ಯಾರ ಪರ? ಪೇಜಾವರ ಶ್ರೀಗಳಿಗೊಂದು ಬಹಿರಂಗ ಪತ್ರ ಎಂದು ಪ್ರಶ್ನಿಸಲಾಗಿದೆ.

ಓ.ಎಲ್.ನಾಗಭೂಷಣಸ್ವಾಮಿ ಅವರು ಇಡೀ ಬರಹದ ಹಿಂದೆ ಇರುವುದು ಮನುಷ್ಯ ಸಮಾನತೆಯನ್ನು ಸಾಧಿಸಬೇಕೆಂಬ ಹಂಬಲ, ಅದಕ್ಕೆ ಅಡ್ಡಿಯಾಗಿರುವ ಜಡಸಂಪ್ರದಾಯ ಗಳ ಬಗ್ಗೆ ಅಸಹನೆ; ತರ್ಕ, ವೈಚಾರಿಕತೆಗಳ ಮೂಲಕ ಸಾವಿರಾರು ವರ್ಷಗಳ ಪ್ರಾಚೀನಕ್ಕೆ ಬದ್ಧರಾಗಿರುವವರ ನಡೆ-ನುಡಿಗಳ ಕಂದರವನ್ನು ಬಯಲು ಮಾಡುವ ಉತ್ಸಾಹ. ಹಾಗಾಗಿ ಈ ಬರಹಕ್ಕೆ ಕಾರಣವಾಗಿರುವ ಶ್ರೀ ಪೇಜಾವರಸ್ವಾಮಿಗಳು ಅವರು ನಮ್ಮಲ್ಲಿ ವ್ಯಾಪಕವಾಗಿರುವ ನಿಲುವಿನ ಪ್ರತಿನಿಧಿಯಾಗಿ ತೋರುತ್ತಾರೆ ಎಂದಿದ್ದಾರೆ.

ಶಾಸ್ತ್ರ ಮತ್ತು ಸಂವಿಧಾನಗಳ ಸಮನ್ವಯ, ದಲಿತರ ಬಳಿಗೆ ಹೋಗಬೇಕೆನ್ನುವ ಅಪೇಕ್ಷೆಯ ಹಿಂದಿನ ಕಾರಣ, ಅಂತರ್ಜಾತೀಯ ವಿವಾಹ, ಮಾಂಸಾಹಾರ, ಬ್ರಾಹ್ಮಣ ಜಾಗೃತಿ, ಮೀಸಲಾತಿ, ಹೆಣ್ಣುಮಕ್ಕಳು ಸ್ವಾತಂತ್ರ್ಯಾನಂತರ ಗಳಿಸಿಕೊಂಡಿರುವ ಸ್ವಾಭಿಮಾನ, ಸ್ವಾತಂತ್ರ್ಯ ಕುರಿತ ಅಸಹನೆ, ಬಾಬ್ರಿ ಮಸೀದಿ ಪ್ರಕರಣ, ಮಠಾಧಿಪತಿ ಮತ್ತು ಅನುಭಾವಿಗಳ ವ್ಯತ್ಯಾಸ, ಮಠಾಧಿಪತಿಗಳು ಹೊಂದಿರ ಬೇಕಾದ ಆದರ್ಶ ನಿರ್ವಹಿಸಬೇಕಾದ ಕರ್ತವ್ಯ, ಈ ಸಂಗತಿಗಳು ಗೋವಿಂದರಾವ್ ಅವರ ಈ ಕೃತಿಯಲ್ಲಿ ಮುಖ್ಯವಾಗಿ ಚರ್ಚೆಗೆ ಒಳಗಾಗಿವೆ.

About the Author

ಜಿ.ಕೆ. ಗೋವಿಂದರಾವ್
(27 April 1937 - 15 October 2021)

ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯ. ಪ್ರಕಟಿತ ಕೃತಿಗಳು- ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು). ...

READ MORE

Related Books