‘ಕಟಾಕ್ಷ’ ಗೌರೀಶ ಕಾಯ್ಕಿಣಿ ಅವರ ವೈಚಾರಿಕ ಬರೆಹಗಳ ಸಂಕಲನ. ಕೃತಿಯ ನಿವೇದನೆಯಲ್ಲಿ ಕಟಾಕ್ಷ ನನ್ನ ಕೆಲವು ವೈಚಾರಿಕ ಬಿಡಿ ಬರಹಗಳ ಸಂಕಲನ. ಹೆಸರೇ ಸೂಚಿಸುವಂತೆ ಇವು ಆಯಾವಿಷಯದ ಬಗೆಗೆ ದಿಟ್ಟವಾಗಿ ದಿಟ್ಟಿಸಿದ ಇಡಿಗಣ್ಣ ನೋಟಗಳಲ್ಲ. ಇವು ಕಡೆಗಣ್ಣ ನೋಟಗಳು. ವ್ಯಾಸಂಗಿಕವೆನ್ನುವುದಕ್ಕಿಂತ ಹೆಚ್ಚಾಗಿ ಪ್ರಾಸಂಗಿಕ ವಿಚಾಗಳು ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಹಾಗೇ ಸಾಹಿತ್ಯ, ವಿಮರ್ಶೆ, ನವ್ಯತೆ, ಶೂದ್ರ, ಬ್ರಾಹ್ಮಣ ಪ್ರಶ್ನೆ, ದಲಿತ ಪ್ರಜ್ಞೆ- ಮುಂತಾದ ವಿಷಯಗಳ ಕುರಿತು ಸಂದರ್ಭಾನುಸಾರವಾಗಿ ನಾನು ಆಗ ಈಗ ಸಂಕ್ರಮಣ, ಸಾಕ್ಷಿ, ಮುಂತಾದ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ ಲೇಖನಗಳಿವು ಎಂದು ತಿಳಿಸಿದ್ದಾರೆ. ಈ ಕೃತಿಯಲ್ಲಿ ಹೊಸ ಕಾವ್ಯದ ಹಾದಿ, ಕಾವ್ಯವೆಂದರೇನು, ವಿಮರ್ಶೆಯ ಬಗೆಗೆ ಒಂದು ವಿಮರ್ಶೆ, ವಿಮರ್ಶೆಯಲ್ಲಿ ನವ್ಯತೆ, ಅನುಭವ ಮತ್ತು ಅಭಿವ್ಯಕ್ತಿ, ಪರಕೀಯ(ಅನಾಥ)ಪ್ರಜ್ಞೆ, ಸಾಹಿತ್ಯದಲ್ಲಿ ಶೂದ್ರ-ಬ್ರಾಹ್ಮಣ ಸಂದರ್ಭ, ಹಾಗೂ ಕಾವ್ಯದಲ್ಲಿ ದಲಿತ ಪ್ರಜ್ಞೆ ಎಂಬ ಲೇಖನಗಳು ಸಂಕಲನಗೊಂಡಿವೆ.
ಸಾಹಿತಿ ಗೌರೀಶ್ ಕಾಯ್ಕಿಣಿ ಅವರು 1912 ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು. ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು. ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...
READ MORE