ಕುವೆಂಪು ಭಾಷಾ ಭಾರತಿ ಪ್ರಾಧಿಕಾರವನ್ನು ಕರ್ನಾಟಕ ಸರಕಾರವು ಕನ್ನಡ ಮತ್ತು ಇತರ ಭಾಷೆಗಳೊಡನೆ ತಿಳಿವಿನ ನಂಟನ್ನು ಬೆಳೆಸುವ ಗುರಿಯಿಂದ ರೂಪಿಸಿದೆ. ಬೇರೆ ಭಾಷೆಗಳ ತಿಳಿವನ್ನು ಕನ್ನಡಕ್ಕೆ ದೊರಕಿಸಲು ಅನುವಾಗುವಂತೆ ವೈವಿಧ್ಯಮಯ ಕೃತಿಗಳ ಅನುವಾದ ಮತ್ತು ಪ್ರಕಟಣೆಯ ಕೆಲಸದಲ್ಲಿ ಪ್ರಾಧಿಕಾರವು ತೊಡಗಿಕೊಂಡಿದೆ. ಕನ್ನಡದ ತಿಳಿವು ಇತರ ನುಡಿಗಳಿಗೂ ಸಿಗುವಂತಾಗಲು ಬೇಕಾದ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ, ನಮ್ಮ ಕಾಲದ ಅಗತ್ಯಕ್ಕೆ ತಕ್ಕ ವಿಚಾರ ಸಾಹಿತ್ಯವನ್ನು ಭಾರತದ ಮತ್ತು ಜಗತ್ತಿನ ವಿವಿಧ ಭಾಗಗಳಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ವಿಚಾರ ಸಾಹಿತ್ಯ ಮಾಲೆ ಪ್ರಾಧಿಕಾರದ ಮಹತ್ವದ ಮಾಲಿಕೆಗಳಲ್ಲೊಂದಾಗಿದೆ.
ಭಾರತೀಯ ಸಮಾಜವಾದವನ್ನು ರೂಪಿಸಿದ ಡಾ. ರಾಮಮನೋಹರ ಲೋಹಿಯಾ ಇಪ್ಪತ್ತನೆಯ ಶತಮಾನದ ಭಾರತ ಕಂಡ ಶ್ರೇಷ್ಠ ಚಿಂತಕರಲ್ಲೊರಾಗಿದ್ದರು ಹಾಗೂ ಕ್ರಿಯಾಶೀಲ ನಾಯಕರಾಗಿದ್ದರು. ಈ ಕಾಲಕ್ಕೆ ಅತ್ಯಂತ ಅಗತ್ಯವಾಗಿರುವ ಲೋಹಿಯಾ. ಕೃತಿಯನ್ನು ಡಾ. ನಟರಾಜ್ ಹುಳಿಯಾರ್ ಸಂಪಾದಿಸಿದ್ದಾರೆ.
ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ...
READ MORE