‘ಮಹಾತ್ಮ ಗಾಂಧೀಜಿಯವರ ತತ್ವ ಚಿಂತನೆಗಳ ಪ್ರಸ್ತುತತೆ’ ಗ್ರಂಥದಲ್ಲಿ ಗಾಂಧೀಜಿಯವರ ವಿಚಾರಧಾರೆಗಳ ಪ್ರಸ್ತುತತೆ ಹಾಗೂ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್‍ರಾಗಿರುವ ರವಿವರ್ಮ ಕುಮಾರ್, ಪ್ರಸಿದ್ದ ಚಿಂತಕರಾದ ಜಿ. ರಾಮಕೃಷ್ಣ ಅವರ ಕೃತಿಗಳು ಹಾಗೂ ಇತರ ಲೇಖಕರ ಚಿಂತನೆಯನ್ನು ಒಳಗೊಂಡಿರುವ ಕೃತಿಗಳ ಇಣುಕು ನೋಟ ಇದರಲ್ಲಿದೆ.
ಡಾ. ಮೌನೇಶ್ವರ ಶ್ರೀನಿವಾಸರಾವ್‍ರವರು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ರ್ಯಾಂಕ್‍ನ್ನು ಪಡೆದ ವಿದ್ಯಾರ್ಥಿಯಾಗಿದ್ದು, “ಭಾರತದ ಸಂಮ್ಮಿಶ್ರ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ: ಒಂದು ವಿಶೇಷ ಅಧ್ಯಯನವಾಗಿ ತಮಿಳು ನಾಡು” ಎಂಬ ಪ್ರಚಲಿತ ರಾಜಕಾರಣಕ್ಕೆ ಅವಶ್ಯವಾಗಿರುವ ಶೀರ್ಷಿಕೆಯ ಮೇಲೆ ಪ್ರೌಢ ಪ್ರಬಂಧವನ್ನು ಮಂಡಿಸಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದಿರುತ್ತಾರೆ. ಡಾ. ಮೌನೇಶ್ವರ ಶ್ರೀನಿವಾಸರಾವ್‍ರವರು ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ...
READ MORE