ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯ ಸಂಪುಟ ಮಾಲೆಯಡಿ ಪ್ರಕಟಿಸಿದ ಕೃತಿ-ಸಂಕೀರ್ಣ. ಡಾ. ಎನ್. ಲಕ್ಷ್ಮಿ ಅವರು ಸಂಪಾದಕರು. ಕಾಣದ ಸಂಪತ್ತಿನ ಬೆನ್ನು ಹತ್ತುವ ಹುಚ್ಚುತನ (ವೀಣಾ ಬನ್ನಂಜೆ), ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯ ಸಾಮಾಜಿಕ ಬದುಕು (ಹೇಮಲತಾ ಮಹಿಷಿ), ಲಿಂಗ ಸಮಾನತೆಯಿಂದ ವೈಜಞಾನಿಕ ಮನೋಭಾವ (ಬಿ.ಎಸ್. ಶೈಲಜಾ), ಮೇಡಂ ಕ್ಯೂರಿ (ಡಾ. ಸರೋಜಿನಿ ಸಂಶಿ), ಭಾರತದಲ್ಲಿ ವಿಜ್ಞಾನ ಅಂದು ಇಂದು (ಉಮಾ ವೆಂಕಟ್), ಕುಟುಂಬ ಕಲ್ಯಾಣದ ನೆಲೆ-ಬೆಲೆ ( ಡಾ. ಸರೋಜಿನಿ ಶಿಂತ್ರಿ), ಕಮರ್ಷಿಯಲ್ ಸೆಕ್ಸ್ದ ವರ್ಕರ್ಸ್ ಮತ್ತು ಸಾಮಾಜಿಕ ತಿರುವು (ಕೆ.ಆರ್. ಶಾನಿ), ಸಂಗೀತದಲ್ಲಿ ಸೌಂದರ್ಯ ಮತ್ತು ರಸಾನುಭೂತಿ (ಡಾ. ಜಯದೇವಿ ಜಂಗಮಶೆಟ್ಟಿ), ವಿಶ್ವ ಮಹಿಳಾ ಆರೋಗ್ಯ ಚಳವಳಿಯ ಕಾಳಜಿಗಳು (ಡಾ. ಕೆ. ಸರೋಜಾದೇವಿ), ಮಹಿಳೆ ಮತ್ತು ನ್ಯಾಯಾಲಯ( ಸಾರಾ ಅಬೂಬಕರ್ ), ವಿಜ್ಞಾನ-ಮಹಿಳೆ( ಚೂಡಾಮಣಿ ಶಿಗಡಿ), ವಿಜ್ಞಾನದಲ್ಲಿ ಮಹಿಳೆ (ಗೀತಾ ಮಂಜ), ಅವಳ ಭಾಷೆ (ಡಾ. ಕೆ.ಆರ್. (ಡಾ. ಕೆ.ಆರ್. ಸಿದ್ಧಗಂಗಮ್ಮ), ಸ್ತ್ರೀಭ್ರೂಣ ಹತ್ಯೆ ಮತ್ತು ತಂತ್ರಜ್ಞಾನ (ನೇಮಿಚಂದ್ರ ) ಸೇರಿದಂತೆ ಒಟ್ಟು 28 ಬರಹಗಳನ್ನು ಇಲ್ಲಿ ಸಂಕಲಿಸಿದೆ. ಕೃತಿಯ ಕುರಿತು ಪ್ರಧಾನ ಸಂಪಾದಕ ನಾಡೋಜ ಡಾ. ಮನು ಬಳಿಗಾರ ‘ಕನ್ನಡ ಲೇಖಕಿಯರ ಅನುಭವ, ಆಲೋಚನೆ, ಆಳದ ತಲ್ಲಣ ಮತ್ತು ಪ್ರತಿಭಟನೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಈ ಮಹಿಳಾ ಸಂಪುಟವು ಹಿಡಿದು ಇಟ್ಟಿದೆ. ಹೆಣ್ಣು ಮತ್ತು ಗಂಡಿನ ಸಂವೇದನೆಗಳ ನಡುವಿನ ಭಿನ್ನತೆಗಳನ್ನು ಮತ್ತು ಸಾಮ್ಯತೆಗಳನ್ನು ಗುರುತಿಸಲು ಈ ಸಂಪುಟವು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.