ಲೇಖಕ ಸಿ.ಎಸ್. ದ್ವಾರಕನಾಥ ಅವರ ಕೃತಿ-ಗೋಡೆ ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ. ದೇವರು ಸರ್ವಾಂತರ್ಯಾಮಿ, ನಿರಾಕಾರ ಎಂದೆಲ್ಲ ಹೇಳುವವರೇ ದೇವರಿಗೊಂದು ದೇವಾಲಯ ಕಟ್ಟಿ ತಮ್ಮ ಹೊಟ್ಟೆ ಉಪಜೀವನಕ್ಕೆ ಆಧಾರ ಮಾಡಿಕೊಳ್ಳುವ ಪುರೋಹಿತ ಶಾಹಿ ಮನಸ್ಥಿತಿಯರಿಗೆ ಸಲಹೆ ರೂಪದ ಎಚ್ಚರಿಕೆಯಾಗಿ ಗೋಡೆ ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ ಎಂಬ ಕೃತಿ ಬರೆದ ಉದ್ದೇಶ. ಎ.ಎಂ. ಮಂಜುನಾಥ ಹಾಗೂ ಕೆ.ಎಲ್. ದಿವ್ಯಾ ಅವರು ಈ ಲೇಖನಗಳನ್ನು ಸಂಪಾದಿಸಿದ್ದಾರೆ.
ಸಿ.ಎಸ್. ದ್ವಾರಕನಾಥ ಅವರು ವೃತ್ತಿಯಿಂದ ವಕೀಲರು. 2019ನೇ ಸಾಲಿನ ’ಅನಿಕೇತನ ಪ್ರಶಸ್ತಿ’ ಪುರಸ್ಕೃತರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು. 'ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2018' ಪ್ರಶಸ್ತಿ ಪುರಸ್ಕೃತರು. ವಾರ್ತಾ ಭಾರತಿ ದಿನಪತ್ರಿಕೆಯ ಅಂಕಣಕಾರರು. ಕೃತಿಗಳು: ಮೂಕ ನಾಯಕ ಹಾಗೂ ಭಾರತ ಸಂವಿಧಾನ : ಐತಿಹಾಸಿಕ ದಾಖಲಾತಿಗಳೊಂದಿಗೆ, ಗಾಂಧಿಮಟ್ಟಿದ ನಾಡಿನಲ್ಲಿ (ಪ್ರವಾಸ ಕಥನ) -ಇವರ ಕೃತಿಗಳು. ...
READ MORE