‘ನೀರ ದಾರಿ’ ಎಂಬುದು ಲೇಖಕಿ ದು. ಸರಸ್ವತಿ ಅವರ ವೈಚಾರಿಕ ಬರಹಗಳ ಸಂಗ್ರಹ ಕೃತಿ. ಮಹಿಳಾ ದಲಿತ ಪ್ರಜ್ಞೆಯನ್ನು ವಿಭಿನ್ನ ನೆಲೆಗಳಿಂದ ಕಟ್ಟಿಕೊಡುವ ವಿಶೇಷ ಪ್ರಯತ್ನವನ್ನು ಈ ಕೃತಿಯಲ್ಲಿ ಕಾಣಬಹುದು. ದಲಿತ ಹೆಣ್ಣುಮಕ್ಕಳ ಜೀವನದ ಬವಣೆಗಳನ್ನು ಕುರಿತ ಅಪರೂಪದ ‘ವಾಚಿಕೆ’(ರೀಡರ್). ಕನ್ನಡದಲ್ಲಂತೂ ವಿಶೇಷವೇ ಆಗಿದೆ. ಹಲವು ಬಗೆಯ ನಿರೂಪಣೆಗಳ (ಡಿಸ್ಕೋರ್ಸ್) ಕೊಲಾಜ್ ಆಗಿ ಮೂಡಿ ಬಂದಿವೆ. ಅನುಭವ ನಿರೂಪಣೆ, ಜೀವನ ಕಥನ, ಕರಾರುವಾಕ್ಕಾದ ಅಧ್ಯಯನಗಳ ಫಲಿತಾಂಶಗಳು ಮತ್ತು ಸ್ವತಂತ್ರ ಆಲೋಚನೆಗಳನ್ನು ಶಿಸ್ತುಬದ್ಧವಾಗಿ ಲೇಖಕಿ ನಿರೂಪಿಸಿದ್ದಾರೆ.
ದು.ಸರಸ್ವತಿ- ಹುಟ್ಟಿದ್ದು 20 ಏಪ್ರಿಲ್ , 1963, ಬೆಂಗಳೂರಿನಲ್ಲಿ. ವಿದ್ಯಾಭ್ಯಾಸವೂ ಬೆಂಗಳೂರಿನಲ್ಲಿಯೇ. ರಂಗಭೂಮಿ, ಚಿತ್ರಕಲೆ, ಮಹಿಳಾ ಮತ್ತು ದಲಿತ ಚಳುವಳಿ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಸರಸ್ವತಿ, ಹೆಣೆದರೆ ಜೇಡನಂತೆ(ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-1997), ಈಗೇನ್ ಮಾಡೀರಿ(ಅನುಭವ ಕಥನ-2000) ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE