’ಒಳ ಮೀಸಲಾತಿ’ ಮುಟ್ಟಲಾರದವನ ಒಡಲಾಳ ಕೃತಿಯನ್ನು ಲೇಖಕರಾದ ಶ್ರೀನಿವಾಸ ಮರಡ್ಡಿ ವೆಂಕಟೇಶ ಬೇವಿನಬೆಂಚಿ ನರಸಿಂಹ ಗುಂಜಳ್ಳಿ ರಮೇಶ ಅರೋಲಿ ಅವರು ಸಂಪಾದಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ತೀವ್ರ ಚರ್ಚೆಗೆ ಒಳಗಾಗಿರುವ ಮತ್ತೊಂದು ಗಂಭೀರ ವಿಚಾರ ಒಳಮೀಸಲಾತಿ, ಹಿಂದುಳಿದ ವರ್ಗಗಳಲ್ಲಿ ಒಳಮೀಸಲಾತಿಯೆಂಬುದು ಅದು ಅಸ್ತಿತ್ವಕ್ಕೆ ಬಂದಾಗಿ ನಿಂದಲೂ ಜಾರಿಯಲ್ಲಿದೆ. ನೂರಾರು ಜಾತಿಗಳಿರುವ ಹಿಂದುಳಿದ ವರ್ಗ, ಹಿಂದುಳಿದ, ಅತಿ ಹಿಂದುಳಿದ ಎಂಬ ಶ್ರೇಣಿಗಳಿರುವುದರಿಂದ ಈ ರೀತಿಯ ಶ್ರೇಣೀಕರಣ ಮೀಸಲಾತಿ ನೀಡಿಕೆಯಲ್ಲೂ ಜಾರಿಗೆ ಬಂದು ಅತ್ಯಂತ ವೈಜ್ಞಾನಿಕವೆಂದು ಪ್ರತಿಪಾದಿಸಲಾಗಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಲ್ಲಿ ಒಳಮೀಸಲಾತಿ ಜಾರಿಗೆ ಬರಬೇಕೆಂದು ಕೂಗು ಕೇಳಿದ ದಿನದಿಂದಲೂ ವಿವಾದಕ್ಕೆ ಒಳಗಾಗಿದೆ. ಇದೊಂದು ಆಶ್ಚರ್ಯಕರ, ಆಘಾತಕಾರಿ ಸಂಗತಿಯೂ ಹೌದು. ಇಂತಹ ವೈಚಾರಿಕ ನಿಲುವುಗಳನ್ನು ಚರ್ಚಿಸುವ ’ಒಳ ಮೀಸಲಾತಿ’ ಬಹಳ ಮುಖ್ಯವಾದ ಕೃತಿಯೆನ್ನಬಹುದು.
©2024 Book Brahma Private Limited.