ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ನಮಗೆಷ್ಟು ಆಸೆ ಬೇಕು. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂಗೆಕಾಗೆಯದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಜಗತ್ತಿನ ಸರ್ವ ಶ್ರೇಷ್ಠ ಕಥೆಗಳು ಎಂದು ಪರಿಗಣಿಸಲಾದ ಬುದ್ಧ ಅಮರ ಜಾತಕ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಜೀವನ ಸಾರ್ಥಕತೆಗೆ ಆಸೆ ಎಷ್ಟು ಬೇಕು? ಯಾವುದಕ್ಕೆ ಆಸೆ ಪಡಬೇಕು. ಯಾವ ಆಸೆಯು ಬದುಕನ್ನು ಪ್ರಪಾತಕ್ಕೆ ತಳ್ಳುತ್ತದೆ. ಯಾವುದು ಅಭಿವೃದ್ಧಿಯತ್ತ ಕೊಂಡೊಯ್ಯತ್ತದೆ ಇವೇ ಮುಂತಾದ ಚಿಂತನೆಗಳು ಇಲ್ಲಿ ಚರ್ಚೆಗೆ ಇಂಬು ನೀಡುತ್ತವೆ. ಈ ಕೃತಿಯು 19 ಶೀರ್ಷಿಕೆಗಳನ್ನು ಒಳಗೊಂಡಿದ್ದು ಪೂಜ್ಯರಲ್ಲದವನಿಗೆ ನಮಿಸಿದೊಡೆ ಕೇಡು ಖಚಿತ, ಯಾರು ಅರ್ಹರು ಈ ಹೂಮಾಲೆ ಮುಡಿಯಲು, ಉಂಡೆದ್ದರು ಪತ್ನಿಯ ಶವದ ಮುಂದೆ, ಜ್ಞಾನಿಗಳಿಗೇಕೆ ಭವಿಷ್ಯ ಕಾಣುತ್ತದೆ, ನಮಗೆ ಎಷ್ಟು ಆಸೆ ಬೇಕು, ಹಿಡಿದವನು ದುಃಖಿ ಬಿಟ್ಟವನು ಸುಖಿ, ಬೋದಿಸತ್ವರೇ ಇದೇನು?, ರಾಜ ದೂರು ಎಂದಿಗೂ, ಪೂರ್ಣಸತ್ಯವಲ್ಲ, ಸುಟ್ಟ ಉಡವು ಓಡಿ ಹೋದರೆ ಮಾಡುವುದೇನು?, ರಜನೆ ಸಿಹಿ ಕಹಿಯ ಮೂಲ, ಸಮರಲ್ಲದವರಲ್ಲಿ ಸಮರ ತರವೆ?, ಹುಲ್ಲೆಂದು ಹುಯಿಲೆಬ್ಬಿಸಿ ಕರ್ಮವ ಕಡೆಗಣಿಸದಿರು, ನಾನು ಆಸಕ್ತನಲ್ಲ ಆದರೆ ವಿತರ್ಕ, ಒಂದರಂತ್ಯ ಮತ್ತೊಂದರಲ್ಲಿ ನೋಡಾ, ನವಿಲ ಕಂಡನಗೆ ಕಾಗೆಯ ಹಂಗೇಕೆ, ಹುಲ್ಲು ಮಾರಿ ದಾನವೇಕೆ ಮಾಡುವೆ, ದೇವರೆಂದರೆ ನೋಡದ ಹೆಣ್ಣ ಪ್ರೀತಿಸಿದಂತೆ, ನಿಮಗೇನು ಬೇಕು, ದೊರೆ ಎಂದರೆ ಹೇಗಿರಬೇಕು ಎಂಬವುಗಳನ್ನು ಒಳಗೊಂಡಿದೆ.
©2024 Book Brahma Private Limited.