ಲೇಖಕ ಡಾ. ಬಿ.ಆರ್ ಅಣ್ಣಾಸಾಗರ ಅವರು ರಚಿಸಿರುವ ಕೃತಿ- ಚಿಂತನೆ ಸೆಲೆ. ಸಾಹಿತ್ಯ, ಸಂಸ್ಕೃತಿ-ವ್ಯಕ್ತಿಚಿತ್ರಣಗಳನ್ನು ಒಳಗೊಂಡಿದೆ. ಮೇ ದಿನಾಚರಣೆ, ಪರಿಸರ ಸಂರಕ್ಷಣೆ, ಮಾನವ ಹಕ್ಕುಗಳು,ಮಹಿಳೆಯರ ಸ್ಥಾನಮಾನ, ವೈಜ್ಞಾನಿಕ ಮನೋಧರ್ಮ, ವಾಲ್ಮೀಕಿ ಮಹಾಕವಿ, ವಿಶ್ವ ಆಹಾರ ದಿನಾಚರಣೆ, ಸುಖದ ಕಲ್ಪನೆ, ರಾಷ್ಟ್ರ ನಿರ್ಮಾಣ, ಕಾಯಕ ಶರಣರ ವಚನಗಳು,ಸ್ವಾಮಿ ವಿವೇಕಾನಂದರು,ಹವ್ಯಾಸಗಳು, ಸೇರಿದಂತೆ 40ಕ್ಕಿಂತ ಹೆಚ್ಚು ಚಿಂತನೆಗಳು ಒಳಗೊಂಡಿದ್ದು.ಇವೆಲ್ಲವೂ ಮನುಷ್ಯನ ಪ್ರತಿದಿನದ ಆಗುಹೋಗುಗಳ ನಡುವೆ ಉತ್ತಮ ಬದುಕಿಗೆ ಅನೇಕ ವಿಷಯಗಳ ಅಗತ್ಯವನ್ನು ಪ್ರತಿಪಾದಿಸುತ್ತವೆ. ನಾಡಿನ ಮಹತ್ವದ ವ್ಯಕ್ತಿಗಳ ದಿನಾಚರಣೆಗಳು ಪ್ರಕೃತಿಗೆ ಸಂಬಂಧಿಸಿದ ಶರಣರ ಹಬ್ಬಗಳ ಪ್ರಾಮುಖ್ಯತೆ ಕುರಿತ ಬರಹಗಳೂ ಇವೆ.
ಲೇಖಕ ಡಾ. ಬಿ.ಆರ್. ಅಣ್ಣಾಸಾಗರ ಅವರು ಮೂಲತಃ ಯಾದಗಿರಿ ಜಿಲ್ಲೆಯ ಗುರುಮಠಕಲ್ ನಿವಾಸಿ. ಅಲ್ಲಿಯೇ ಪಿಯುಸಿ ವರೆಗೆ ಶಿಕ್ಷಣ ಪೂರೈಸಿದ್ದಾರೆ. ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್, ಆಂಧ್ರಪ್ರದೇಶದ ಕುಪ್ಪಂನಲ್ಲಿಯ ದ್ರಾವಿಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಹಾಗೂ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯನಿಂದ ಬಿ.ಸಿ.ಜೆ; ಪಿ.ಜಿ.ಡಿ.ಇ.ಇ.ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಸೇಡಂ ನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದು, ದೂರದರ್ಶನದಲ್ಲೂ ಉಪನ್ಯಾಸಗಳನ್ನು ನೀಡಿದ್ದಾರೆ. ಕಲ್ಬುರ್ಗಿ ಆಕಾಶವಾಣಿ ಕೇಂದ್ರದಿಂದ ಹಲವು ಚಿಂತನ, ...
READ MORE