ಕರ್ನಾಟಕದ ಪ್ರತಿಷ್ಟಿತ ಲೇಖಕರುಗಳು ಬರೆದಂತಹ ಲೋಹಿಯಾ ಬದುಕು ಮತ್ತು ವಿಚಾರ, ಆದರ್ಶಗಳ ಕುರಿತ ಸಂಕಲನ ‘ಎಲ್ಲಾ ಕಾಲದ ಬೆಳಕು’. ಲೋಹಿಯಾ ಅವರ ಆದರ್ಶಗಳು ಸಾರ್ವಕಾಲಿಕ. ಸಮಾಜ, ರೈತರು, ಹಳ್ಳಿ ಮತ್ತು ದೇಸೀಯತೆಯ ಕುರಿತಾಗಿ ಹುಟ್ಟಿಬಂದ ಆದರ್ಶಗಳನ್ನು ಅರಿಯುವ ಜರೂರತ್ತು ಈಗಿನ ಕಾಲದಲ್ಲಿ ಅನಿವಾರ್ಯವಾಗಿದೆ. ವಿದೇಶಿ ವಾದಗಳಿಗೆ ಮಣೆಹಾಕಿ ನಮ್ಮತನದ ಗಂಧಗಾಳಿ ಗೊತ್ತಿಲ್ಲದೇ ಬರೆದಿರುವಂತಹ ವಿಚಾರವಾದ ಅಥವಾ ಆದರ್ಶವಲ್ಲ. ನಮ್ಮ ಮಣ್ಣಿನಲ್ಲಿ ಹುಟ್ಟಿ ಬೆಳೆದಂತಹ ವಿಚಾರವಾದ, ಆದುದರಿಂದ ಲೋಹಿಯಾ ಅವರ ವಿಚಾರವಾದದಲ್ಲಿ ನಮ್ಮ ಊರಿನ ನಮ್ಮ ಮಣ್ಣಿನ ಆಸ್ವಾದವಿದೆ. ಎಲ್ಲಿಂದಲೋ ಎರವಲು ಪಡೆದ ಆದರ್ಶದ ಸಿದ್ದಾಂತಗಳ ಮೇಲೆ ಕಟ್ಟಿದ ಗಾಳಿಗೋಪುರವಲ್ಲ. ಎಲ್ಲಾ ವಿದ್ಯಾರ್ಥಿಗಳಿಗೂ ಲೋಹಿಯಾ ಅವರ ತತ್ವ ಆದರ್ಶ ಹಾಗೂ ಚಿಂತನೆಗಳನ್ನು ಪರಿಚಯಪಡಿಸಬೇಕು ಎನ್ನುವ ರಾಯಚೂರಿನ ಲೋಹಿಯಾ ಪ್ರತಿಷ್ಠಾನದ ಉದ್ದೇಶದ ಫಲ ‘ಎಲ್ಲಾ ಕಾಲದ ಬೆಳಕು’. ಪುಸ್ತಕದ ಶೀರ್ಷಿಕೆಯಂತೆ ಲೋಹಿಯ ಅವರ ತತ್ವ ಆದರ್ಶಗಳು ರಲ್ಲರಿಗೂ ಎಲ್ಲಾ ಕಾಲದ ಬೆಳಕು. ಅವರ ಜನ್ಮ ಶತಮಾನೋತ್ಸವದ ಸಂಧರ್ಭದಲ್ಲಿ ಹೊರಬಂದಿರುವ ಈ ಹೊತ್ತಿಗೆ ಸಂಗ್ರಹ ಯೋಗ್ಯ.
ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿ-ಲೇಖಕ ದಸ್ತಗೀರ್‌ಸಾಬ ದಿನ್ನಿ, ತಾಳಕೇರಿ ಬಸವರಾಜ, ಬಿಸಿಲ ಹೂ, ಎಲ್ಲಾ ಕಾಲದ ಬೆಳಕು, ಆದಯ್ಯ, ಹೊಸಗನ್ನಡ ಕಥಾಸಂಗ್ರಹ, ಹಗೇವು, ದಿನ್ನಿ ತಾಳಪಲ್ಲಿ ವೆಂಕಯ್ಯ, ಸಾಹಿತ್ಯ ಸಲ್ಲಾಪ, ಜಾಗತೀಕರಣ ಮತ್ತು ಸಂಸ್ಕೃತಿ ಅವರ ಪ್ರಕಟಿತ ಕೃತಿಗಳು. ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ಜನನ.ಕವನ , ಗಜಲ್ , ಲೇಖನ, ವಿಮರ್ಶೆ ಬರೆದಿದ್ದಾರೆ. ...
READ MORE