ಸದ್ಗುರು (ಜಗ್ಗಿ ವಾಸುದೇವ) ಅವರ ಕೃತಿ-ಮರಣ. ‘ಸಾವಿನ ಮರ್ಮವನ್ನು ಭೇದಿಸಿ’ ಎಂಬ ಉಪಶೀರ್ಷಿಕೆ ಇದ್ದು, ಬದುಕಿನ ಆಯಾಮಗಳನ್ನು ವಿವರಿಸುವ ಲೇಖಕರು, ಸಾವಿನ ಮರ್ಮವನ್ನೂ ಸಹ ಭೇದಿಸುವ ಬಗೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ವಿಚಾರಗಳನ್ನು ಮಂಡಿಸಿರುವ ಕೃತಿ ಇದು. ಅತ್ಯಂತ ಸರಳ ಭಾಷೆಯ ಈ ವಿವರಣೆಗಳು ಸಾಮಾನ್ಯರನ್ನು ಸುಲಭವಾಗಿ ಮನಮುಟ್ಟುತ್ತವೆ. ತುಂಬಾ ಗಂಭೀರವಾಗಿ ಇರುವುದೂ ಒಳ್ಳೆಯದಲ್ಲ. ಅದು ಒಂದು ರೀತಿಯಲ್ಲಿ, ದೀರ್ಘಕಾಲವರೆಗಿನ ಸಾವಿನ ಸ್ಥಿತಿ. ಆದ್ದರಿಂದ, ಬದುಕನ್ನು ಹೇಗೆ ಎಷ್ಟು ಚಂದವಾಗಿ ಅನುಭವಿಸಬೇಕು ಎಂಬ ವಿವರಗಳಿವೆ. ಬದುಕಿನಲ್ಲಿ ಸಾವು ನಿಶ್ಚಿತವಾಗಿದೆ. ಆದ್ದರಿಂದ, ಅದರ ಬರುವಿಕೆಯನ್ನು ಸ್ವಾಗತಿಸಲು ಹೇಗೆ ಮಾನಸಿಕವಾಗಿ ಸಿದ್ಧವಾಗಿರಬೇಕು ಎಂಬ ಬಗ್ಗೆಯೂ ಮನೋಸ್ಥೈರ್ಯ ನೀಡುವ ಸಲಹೆಗಳಿವೆ. ಸಾಯುವವರೆಲ್ಲರೂ ಬದುಕಿನ ಮಹತ್ವವವನ್ನು ತಿಳಿಯಲೇಬೇಕಾದ ಕೃತಿ ಇದು.
.ಜಗ್ಗಿ ವಾಸುದೇವ ಅವರು ಜನಮಾನಸದಲ್ಲಿ ‘ಸದ್ಗುರು’ ಎಂದೇ ಖ್ಯಾತಿ. ಭಾರತೀಯ ಪರಂಪರೆ-ಸಂಸ್ಕೃತಿ, ಮಾನವ ಸ್ವಭಾವಗಳ ವ್ಯಾಖ್ಯಾನ, ಸಾಮಾಜಿಕ ಆಚರಣೆ-ಹಬ್ಬಗಳ-ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮದೇ ವಿಶಿಷ್ಟ ವೈಚಾರಿಕ ದೃಷ್ಟಿಕೋನದಿಂದ ಪ್ರವಚನಗಳನ್ನು ಹೇಳುವುದು ಇವರ ವ್ಯಕ್ತಿತ್ವದ ಪ್ರಮುಖ ಅಂಶ. ಕೃತಿಗಳು: ಮರಣ, ...
READ MORE