ಯಂತ್ರಗಳನ್ನು ಕಳಚೋಣ ಬನ್ನಿ

Author : ಪ್ರಸನ್ನ

Pages 235

₹ 126.00




Year of Publication: 2009
Published by: ದೇಶಿ ಪುಸ್ತಕ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040.
Phone: 9845096668

Synopsys

ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಬರೆದ ಕೃತಿ-ಯಂತ್ರಗಳನ್ನು ಕಳಚೋಣ ಬನ್ನಿ. ದೇಸಿ ಜೀವನ ಪದ್ಧತಿ, ದೇಸಿ ಆಹಾರ ಪದ್ಧತಿ ಇಂತಹ ಕೃತಿಗಳನ್ನು ಬರೆಯುವ ಮೂಲಕ ಪ್ರಕೃತಿಯೊಂದಿಗೆ ಸಹಕರಿಸಿಕೊಂಡುವ ಹೋಗುವ ಬದುಕಿನ ರೀತಿ-ನೀತಿಗಳ ಬಗ್ಗೆ ಅರಿವು ಮೂಡಿಸುತ್ತಲೇ ಬಂದ ಲೇಖಕರು, ಈಗ ಅದೇ ಚಿಂತನೆಯ ಧಾಟಿಯಲ್ಲಿ ‘ಯಂತ್ರಗಳನ್ನು ಕಳಚೋಣ ಬನ್ನಿ’ ಕೃತಿಯನ್ನು ರಚಿಸಿದ್ದಾರೆ. ಯಂತ್ರಗಳನ್ನು ಮಾನವ ನಿಯಂತ್ರಿಸಬೇಕೇ ಹೊರತು ಯಂತ್ರಗಳೇ ಮಾನವನನ್ನು ನಿಯಂತ್ರಿಸಬಾರದು. ಆದರೆ, ಪ್ರಸಕ್ತ ಆಧುನಿಕ ಜೀವನ ಪದ್ಧತಿಯಲ್ಲಿ ಯಂತ್ರಗಳೇ ಮನುಷ್ಯನ ವಿಚಾರಗಳ-ವರ್ತನೆಗಳನ್ನು ನಿರ್ಧರಿಸುತ್ತಿರುವುದು ಅಪಾಯಕಾರಿ ಎಂಬ ಚಿಂತನೆಗಳು ಕೃತಿಯಲ್ಲಿ ಗಂಭೀರ ಚರ್ಚೆಗೆ ಒಳಪಟ್ಟಿವೆ.

About the Author

ಪ್ರಸನ್ನ
(23 March 1951)

ಖ್ಯಾತ ರಂಗಕರ್ಮಿ ಪ್ರಸನ್ನ ‌ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು.  ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.  ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ...

READ MORE

Related Books