ಆಲಯ-ಬಯಲು

Author : ಜಿ.ಕೆ. ಗೋವಿಂದರಾವ್

Pages 272

₹ 243.00




Year of Publication: 2017
Published by: ಸಿರಿವರ ಪ್ರಕಾಶನ
Address: #ಎಂ 37/ಬಿ, 8ನೇ ಅಡ್ಡರಸ್ತೆ, ಲಕ್ಷ್ಮೀನಾರಾಯಣಪುರ, ಬೆಂಗಳೂರು-560021.
Phone: 9844109706

Synopsys

ಖ್ಯಾತ ಚಿಂತಕ ಪ್ರೊ. ಜಿ.ಕೆ. ಗೋವಿಂದರಾವ್ ಅವರ ಲೇಖನಗಳ ಸಂಗ್ರಹ ಕೃತಿ-ಆಲಯ-ಬಯಲು. ನೇರ ನಡೆ-ನುಡಿಯ ಲೇಖಕರು ತಮ್ಮ ಅನುಭವದ ಮೂಲಕ ಕಂಡುಕೊಂಡ ಸತ್ಯವನ್ನು ನೇರವಾಗಿ ಕಟ್ಟಿಕೊಟ್ಟಿದ್ದು, ಸಾಹಿತ್ಯಕ ಗಟ್ಟಿತನಕ್ಕೆ ಕನ್ನಡಿ ಹಿಡಿಯುತ್ತವೆ. ಸ್ವಾರ್ಥ ಸಾಧನೆಗಾಗಿ ಮೌಢ್ಯವನ್ನು ಪೋಷಿಸುವ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ. ಇಲ್ಲಿಯ ಎಲ್ಲ ಲೇಖನಗಳಿಗೆ ವೈಚಾರಿಕತೆಯೇ ಜೀವಾಳವಾಗಿದೆ.

About the Author

ಜಿ.ಕೆ. ಗೋವಿಂದರಾವ್
(27 April 1937 - 15 October 2021)

ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯ. ಪ್ರಕಟಿತ ಕೃತಿಗಳು- ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು). ...

READ MORE

Related Books