ನಾನೊಂದು ಪ್ರಶ್ನೆ ಕೇಳಲೇ?

Author : ವಿ. ಕೆ. ತಾಳಿತ್ತಾಯ

Pages 96

₹ 45.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: # ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ಲೇಖಕ ವಿ.ಕೆ. ತಾಳಿತ್ತಾಯ ಅವರ ಕೃತಿ-ನಾನೊಂದು ಪ್ರಶ್ನೆ ಕೇಳಲೆ?. ಪ್ರಶ್ನೆಗಳನ್ನು ಕೇಳುವುದು ವ್ಯಕ್ತಿಯೊಬ್ಬನು ವೈಚಾರಿಕವಾಗಿ ಜೀವಂತ ಇರುವಿಕೆಯ ಸಂಕೇತ. ಮಕ್ಕಳಂತೂ ಪ್ರಶ್ನೆಗಳನ್ನು ಕೇಳಿ ಕೇಳಿ ಮಾಹಿತಿ ಪಡೆಯುತ್ತಲೇ ಇರುವುದು ಮಾತ್ರವಲ್ಲ; ಅವರ ಬುದ್ದಿಮತ್ತೆಯ ಸೂಚಕವೂ ಆಗಿದೆ. ಹೀಗೆ, ಮಕ್ಕಳ ಚಿಂತನೆಗಳನ್ನು ಪ್ರೇರೇಪಿಸುವುದು ಮುಖ್ಯ. ದಿನವಿಡೀ ಆಟ, ಓದು ಮತ್ತು ಇತರ ಹವ್ಯಾಸಗಳಲ್ಲಿ ಕಾಲ ಕಳೆಯುತ್ತಿರುವವರಲ್ಲಿ ಒಮ್ಮೊಮ್ಮೆ ಮನಸ್ಸಿನಲ್ಲಿ ಹಲವಾರು ಕುತೂಹಲಕಾರಿ ಯೋಚನೆಗಳು ಬರುತ್ತವೆ. ಈ ಪುಸ್ತಕ ಅಂಥ ಯೋಚನೆಗಳ ಕುರಿತಾದದ್ದು. ನಾವೇಕೆ ಪ್ರಶ್ನೆಗಳನ್ನು ಕೇಳುತ್ತಿರಬೇಕು ? ನಂಬಿಕೆಗಳಿಂದ ನಮಗೇನು ಒಳ್ಳೆಯದಾಗಬಹುದು ? ಹಕ್ಕು, ನ್ಯಾಯ, ಸ್ವಾತಂತ್ರ್ಯ, ವೈಜ್ಞಾನಿಕ ಮನೋಭಾವ, ನೀತಿ, ಸೌಂದರ್ಯಪ್ರಜ್ಞೆ, ಇತಿಹಾಸ, ಮುಕ್ತ ಸಮಾಜ - ಇವೆಲ್ಲಾ ಪರಸ್ಪರ ಒಂದಕ್ಕೊಂದು ನೇರವಾದ ಸಂಬಂಧವಿರದ ವಿಷಯಗಳಾದರೂ, ಅವು ನಮ್ಮ ಜೀವನಕ್ಕೆ ನಿರ್ದಿಷ್ಟವಾದ ಅರ್ಥ ನೀಡುವ ವಿಷಯಗಳು. ಅವುಗಳ ಬಗ್ಗೆ ಇನ್ನೊಂದು ಕಿರುನೋಟ ನೀಡುವ ಪ್ರಯತ್ನ ಅಷ್ಟೆ. ಈ ಪುಸ್ತಕದ ಉದ್ದೇಶ ಪ್ರತಿಯೊಂದು ಜೀವನ ಸಂಬಂಧಿ ವಿಷಯದ ಬಗ್ಗೆ ಪ್ರಶ್ನಿಸುವ ಹವ್ಯಾಸವನ್ನು ಪ್ರೋತ್ಸಾಹಿಸುವುದು, ಪ್ರತಿಯೊಂದು ಸಂದೇಹವನ್ನು ಪ್ರಶ್ನೆಯಾಗಿ ಪರಿವರ್ತಿಸಿ ಸೂಕ್ತ ಉತ್ತರವನ್ನು ಕಂಡುಕೊಳ್ಳುವುದು, ಪ್ರಶ್ನೆಗಳ ಮೂಲಕ ಹಲವು ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಈ ಪುಸ್ತಕ ತೋರಿಸಿ ಕೊಡುತ್ತದೆ.

About the Author

ವಿ. ಕೆ. ತಾಳಿತ್ತಾಯ

ಲೇಖಕ ವಿ.ಕೆ.ತಾಳಿತ್ತಾಯ ಅವರು (ಕೃಷ್ಣಮೂರ್ತಿ ತಾಳಿತ್ತಾಯ) ಕಾಸರಗೋಡು ತಾಲೂಕಿನ ಮಂಜೇಶ್ವರ ಬಳಿಯ ವರ್ಕಾಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗವನ್ನು ಮಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಮಾಡಿದರು. ವಾಣಿಜ್ಯ, ಸಮಾಜ ಸೇವೆ ಮತ್ತು ಮಾನವ ಸಂಪನ್ಮೂಲಗಳಲ್ಲಿ ವಿದ್ಯಾರ್ಹತೆಗಳನ್ನು ಹೊಂದಿದ್ದು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಮಂಗಳೂರಿನ ಬೃಹತ್ ಮೋಂಬತ್ತಿ ಕಾರ್ಖಾನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಮಂಗಳೂರಿನಲ್ಲಿ ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಯ ಸದಸ್ಯರು.   ಕೃತಿಗಳು: ನಾನೊಂದು ಪ್ರಶ್ನೆ ...

READ MORE

Conversation

Reviews

(ಹೊಸತು, ಅಕ್ಟೋಬರ್ 2012, ಪುಸ್ತಕದ ಪರಿಚಯ)

ವಿವಿಧ ಸಂಗತಿಗಳ ಬಗ್ಗೆ ಪ್ರಬಂಧಗಳನ್ನು ಬರೆಯುವುದು, ಮಾಹಿತಿಯನ್ನು ನೀಡುವುದು ಸುಲಭ ಆದರೆ ವಿಷಯ-ಸಂಗತಿಗಳು ಕೇವಲ ಪ್ರಬಂಧದ ರೂಪದಲ್ಲಿದ್ದರೆ ಓದುಗರಿಗೆ ರುಚಿಸುವುದಿಲ್ಲ ಅದರ ಬದಲು ಕಥೆಯ ಹಂದರವನ್ನು ಪಡೆದುಕೊಂಡರೆ ಏಷಯವು ಸುಲಭವಾಗಿ ಗ್ರಾಹ್ಯ ಆಗುತ್ತದೆ. ಆ ಮೂಲಕ ಓದುವ ಕುತೂಹಲವನ್ನು ಹೆಚ್ಚಿಸುತ್ತಾ ಓದುಗರ ಮನಸ್ಸನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿ ಕಥೆಗಳಿಗೆ ಬಂದುಬಿಡುತ್ತದೆ. ಈ ಕೃತಿಯ ವಿಶಿಷ್ಟತೆ ಇರುವುದೇ ಇಲ್ಲಿ ತತ್ವಶಾಸ್ತ್ರ, ಆಧ್ಯಾತ್ಮ, ಜೀವನ ಮೌಲ್ಯಗಳು – ಹೀಗೆ ಹಲವು ಸಂಗತಿಗಳನ್ನು ನಿರೂಪಿಸಲಾಗಿರುವ ಇಲ್ಲಿನ ಬರಹಗಳು ಲೇಖನಗಳೂ ಹೌದು, ಕಥೆಗಳೂ ಹೌದು, ಸಂವಾದಗಳೂ ಹೌದು, ಈ ಮೂರರ ಗುಣಗಳೂ ಇಲ್ಲಿನ ಬರಹಗಳಿಗೆ ಇವೆ. ಪ್ರಶ್ನೆಗಳು ಮತ್ತು ಆ ಪ್ರಶ್ನೆಗಳಿಗೆ ತಕ್ಕ ಉತ್ತರಗಳ ರೂಪದ ಸಂವಾದದಂತೆ ಸಾಗುವ ಈ ಬರಹಗಳನ್ನು ವಯೋಮಾನದ ಹಂಗಿಲ್ಲದೆ ಎಲ್ಲರೂ ಓದಬಹುದಾಗಿದೆ. ತತ್ವಜ್ಞಾನಿಯಾಗಿದ್ದ ಸಾಕ್ರಟೀಸನ ವಿಚಾರಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡದ್ದೇ ಅವು 'ಸಂವಾದ'ಗಳ ರೂಪಗಳಿಂದಾಗಿ 'ದ ಡೈಲಾಗ್ಸ್ ಆಫ್ ಸಾಕ್ರಟೀಸ್' ಎಂತಲೇ ಆತನ ಕೃತಿಗಳು ಪ್ರಚುರಗೊಂಡವು. ಗುರು-ಶಿಷ್ಯರ ನಡುವಿನ ಪ್ರಶೋತ್ತರಗಳ ಮಾದರಿಯಲ್ಲಿ ಅಲ್ಲಿ ಸಂವಾದ ಸಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಅಜ್ಜ ಮತ್ತು ಮೊಮ್ಮಕ್ಕಳ ನಡುವೆ ನಡೆಯುವ ಹಲವು ಸಂವಾದಗಳು ನಮ್ಮಲ್ಲಿನ ಎಷ್ಟೋ ಪ್ರಶ್ನೆಗಳಿಗೆ ಉತ್ತರವನ್ನು ಕಾಣಿಸುತ್ತದೆ. ವಿಷಯದಿಂದ ವಿಷಯಕ್ಕೆ ಜಿಗಿಯುವ ಚರ್ಚೆ, ಸರಳವಾದ ನಿರೂಪಣಾ ಶೈಲಿ, ಮುಗ್ಧತೆ ಮತ್ತು ಜಾಣತನ ಬೆರೆತ ಪ್ರಶೋತ್ತರಗಳು – ಇಲ್ಲಿನ ಬರಹಗಳ ಹೈಲೈಟ್ಸ್ ಇವು ಬಹಳ ಭಾರವೆನಿಸುವುದಿಲ್ಲ; ತೀರ ಹಗುರವೂ ಅಲ್ಲ.

Related Books