ಮೊದಲ ಸಹಸ್ರಮಾನದ ಕನ್ನಡ ಶಾಸನಗಳು

Author : ಷ. ಶೆಟ್ಟರ್‌

Pages 564

₹ 320.00




Year of Publication: 2022
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040

Synopsys

'ಮೊದಲ ಸಹಸ್ರಮಾನದ ಕನ್ನಡ ಶಾಸನಗಳು' ಶಾಸನ ಸಂಪುಟವನ್ನು ಲೇಖಕ ಷ.ಶೆಟ್ಟರ್‌ ಅವರು ರಚಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಿಂದ ಈವರೆಗೆ ಪ್ರಕಟವಾಗಿರುವ ಹಳಗನ್ನಡ ಶಾಸನಗಳೆಲ್ಲವನ್ನೂ ಸಂಗ್ರಹಿಸಿ ಮತ್ತೊಂದು ವಿಧಾನದಲ್ಲಿ ಸಂಪಾದಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸುಮಾರು ಎರಡು ಸಾವಿರ ಹಳಗನ್ನಡ ಶಾಸನಗಳನ್ನು ಮತ್ತೊಮ್ಮೆ ಸಂಪಾದಿಸಿ ಪ್ರಕಟಿಸಿವುದು ಈ ಅಧ್ಯಯನದ ಉದ್ದೇಶವಾಗಿದೆ. ಈ ಕೃತಿಯ ಅನುಕರಮದಲ್ಲಿ ಗಂಗ ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಕೃಷ್ಣ 2, ಕನ್ನರದೇವ, ನೀತಿಮಾರ್ಗ ಪೆರ್ಮನಡಿ, ಮಹಾವಳಿ ಬಾನರಸ, ನೀತಿಮಾರ್ಗ, ಸತ್ಯವಾಕ್ಯ ಪೆರ್ಮನಡಿ, ರಾಷ್ಟ್ರಕೂಟ ಅಮೋಘವರ್ಷ, ಗಂಗಾ ಶಿವಕುಮಾರ, ದುಗ್ಗಮಾರ,ವಿಕ್ರಮಾದಿತ್ಯ ಜಯಮೇರು, ಮೈದುಂಬರು, ವಿಜಯಾದಿತ್ಯ ಮಾರಮ್ಮ, ಎರೆಯಪ್ಪರಸ, ಬಾದಾಮಿ ಚಾಲುಕ್ಯ, ಪಲ್ಲವ ಸುಭತುಂಗ, ಗಂಗ ಸತ್ಯವಾಕ್ಯ, ಗಂಗ ನೀತಿಮಾರ್ಗ, ರಾಷ್ಟ್ರಕೂ ಅಕಾಲವರ್ಷ, ರಾಚಮಲ್ಲ, ಎರಡನೆಯ ಕೃಷ್ಣ, ಕನ್ನರವಲ್ಲಬ, ಕನ್ನಡಿ ಅರಸ, ಪಲ್ಲವರಾಮ, ನೊಳಂಬ, ನೊಳಂಭಾದಿರಾಜ, ಅಯ್ಯಪದೇವ, ಅಮ್ಮಣದೇವ, ಮಾದಿವರ್ಮ, ವೈದುಂಬ ಮಹಾರಾಜ, ಬಳರ ಚರಿತ್ರ, ಬಳರ ಹರಿತಿ,ರಾಜಮಲ್ಲ ಸತ್ಯವಾಕ್ಯ, ವಿಕ್ರಮಾದಿತ್ಯ ಸಾನ್ತರ, ನೀತಿಮಾರ್ಗ ಎರೆಗಂಗ, ರಾಷ್ಟ್ರಕೂಟ ಅಕಾಲವರ್ಷದೇವ ಮುಂತಾದ ಅನುಕ್ರಮಗಳನ್ನು ಹೊಂದಿದೆ.

About the Author

ಷ. ಶೆಟ್ಟರ್‌
(11 December 1935)

ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...

READ MORE

Related Books