ಸಂವಿಧಾನ ಮತ್ತು ಅಂಬೇಡ್ಕರಿಸಂ ಬಗ್ಗೆ ಅಧ್ಯಯನ ನಡೆಸಿರುವ , ಲೇಖಕ ಡಾ. ಸಿ. ಆರ್ ದ್ವಾರಕಾನಾಥ್ ಅವರ ಸಮಾಜ- ಸಂಸ್ಕೃತಿಗಳ ಕುರಿತಾದ ಬರಹಗಳನ್ನು ’ಗೋಡೆ – ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಪುಸ್ತಕ ಒಳಗೊಂಡಿದೆ.
ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿ, ಕಾನೂನು, ಸಾಹಿತ್ಯ, ಸಮಾಜಶಾಸ್ತ್ರೀಯ ಅಧ್ಯಯನದಿಂದಲೂ, ದಟ್ಟ ಜೀವಾನಾನುಭವದಿಂದಲೂ ಮಾಗಿದ ಪ್ರಬುದ್ಧ ಚಿಂತನಾಶೀಲ ಮನಸ್ಸೊಂದು ಸಮಾಜದ ಕುಸಿದ ಭಾಗವನ್ನು ಗಮನಿಸಿ ಪ್ರಭುತ್ವದ, ಧರ್ಮಾಂಧರ ಕೆಂಗಣ್ಣಿಗೂ ಗುರಿಯಾಗಿ ವ್ಯವಸ್ಥೆಯೊಡನೆ ನಡೆಸುವ ಹೆಣಗಾಟದ ಕಥನವಿದು.
ಪ್ರೀತಿ , ಶಾಂತಿ , ಏಕತೆಗಾಗಿ ದೇಶ, ಎನ್ನುವಂತಹ ಆಶಯಗಳು ದ್ವಾರಕಾನಾಥ್ ಅವರ ಬರಹಗಳ ಮೂಲಕ ಮನಗಾಣಬಹುದು. ಇವರ ಬರಹಗಳನ್ನು ಮಂಜುನಾಥ ವಿ. ಎಂ, ಮತ್ತು ಡಾ. ದಿವ್ಯ ಕೆ .ಎಲ್ ಒಂದೆಡೆ ಸಂಪಾದಿಸಿ, ಈ ಪುಸ್ತಕವನ್ನು ಹೊರತಂದಿದ್ದಾರೆ.
ಕವಿ, ಲೇಖಕ ವಿ.ಎಂ. ಮಂಜುನಾಥ್ ಬೆಂಗಳೂರಿನ ವೆಂಕಟಾಲ ಗ್ರಾಮದಲ್ಲಿ ಸೆಪ್ಟಂಬರ್ 13, 1976ರಲ್ಲಿ ಜನಿಸಿದರು. ತಂದೆ-ಮುನಿಮಾರಪ್ಪ ಮತ್ತು ತಾಯಿ- ನಾರಾಯಣಮ್ಮ. ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ, ಹೈಸ್ಕೂಲ್ ಓದುತ್ತಿರುವಾಗಲೇ ಲಂಕೇಶರ ಪ್ರಭಾವದಿಂದ ಸಾಹಿತ್ಯ ರಚನೆ ಆರಂಭಿಸಿದರು. ಇವರ ಮೊದಲ ಪದ್ಯ ಲಂಕೇಶ್ ನೆನಪಿನ ‘ಇಂತಿ ನಮಸ್ಕಾರಗಳು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಭಿನಯ ತರಂಗ ಮತ್ತು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಡಿಪ್ಲೋಮಾ, 2003ರಲ್ಲಿ ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು, 2004ರಲ್ಲಿ ಲೆವೆಲ್ ಕ್ರಾಸಿಂಗ್ ಕವನ ಸಂಕಲನ, 2008ರಲ್ಲಿ ಬ್ರಾಂಡಿ ಕಥಾಸಂಕಲನ, 2008ರಲ್ಲಿ ಕ್ರಿಮಿ ನಾಟಕ, 2012ರಲ್ಲಿ ...
READ MORE