ಮನುಷ್ಯನಿಗೆ ತನ್ನ ಹುಡುಕಾಟವು ಅರಿವಾದಾಗ ಆಲೋಚನೆ ಬೆಳೆದಿದೆ. ತನ್ನ ಸುಖವು ಸಮಾಜದ ಸುಖವೆಂಬ ಅರಿವು ಮೊದಲು ಎಚ್ಚರವಾಗಿ, ನಂತರ ತನ್ನನ್ನು ಕಳಚಿಕೊಳ್ಳುತ್ತಾ ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಳ್ಳುವ ಗುಣ ಬೆಳೆಯುತ್ತದೆ. ಈ ಗುಣದಲ್ಲಿ ತಾನು ಎಂಬುದೇ ಸಖಿ ಭಾವ. ಈ ಸಖಿ ಭಾವಕ್ಕೆ ಇಲ್ಲಿ ಕೆಲವು ವಿಚಾರಗಳಿವೆ. ಇವು ಉಪದೇಶಗಳಲ್ಲ. ತನ್ನ ಆತ್ಮ ಚಿಂತನ ವಿಚಾರಗಳು. ಇವುಗಳಿಗೆ ನಿಮ್ಮ ವಿಚಾರ ಸಾರಗಳನ್ನು ಸೇರಿಸಿ, ಕೈಬಿಟ್ಟು, ಮುಂದುವರೆಸುತ್ತಾ ಓದಿಕೊಳ್ಳಬಹುದು. ಅಳವಡಿಸಿಕೊಳ್ಳಬಹುದು. ಅದೇ ಜೀವನಪ್ರೀತಿ. ನಮಗೆ ಇನ್ನೊಬ್ಬರು ಏನು ನೀಡಿದ್ದಾರೆ ಎನ್ನುವ ಮೊದಲು ಇನ್ನೊಬ್ಬರಿಗೆ ನಾವು ಏನು ನೀಡಿದ್ದೇವೆ ಎನ್ನುವ ಭಾವ ಮೊದಲು ಮೂಡಿದರೆ ನಮ್ಮ ನಮ್ಮ ಜೀವನಪ್ರೀತಿ ಸಾರ್ಥಕ. ಈ ನಮ್ಮೊಳಿಗಿನ ಜ್ಞಾನವೇ ಈ ಸಖಿ. ಆದ್ದರಿಂದ ಈ ಸಖಿಯನ್ನು ಶಾರದೆಯಾಗಿ ಕಾಣಬಹುದು. ತನ್ನೊಳಗೆ ಹೊಸ ಸೃಷ್ಟಿಗಳ ದೃಷ್ಟಿಸಬಹುದು. ಇಲ್ಲಿ ನೂರು ಚಿತ್ರ ವಿಚಾರಗಳಿವೆ ಅವೆಲ್ಲವೂ ನಿಮ್ಮ ಮನದ ಚಿಂತನೆಗಳೇ ಆಗಿವೆ. ಸ್ವೀಕರಿಸಿ, ಬದುಕನ್ನು ಒತ್ತಡಗಳ ನಡುವೆಯೂ ಸಮಾಧಾನಗೊಳಿಸಿಕೊಳ್ಳೋಣ ಬನ್ನಿ. ಇರುವಷ್ಟು ಬಾಳ್ವೆಯನು ಬಂದಂತೆ ಸ್ವೀಕರಿಸಿ ಬದುಕುವುದು ಬದುಕಿನ ಸಾರ್ಥಕ ಕಾರ್ಯ. -ಅಂಕುರ
https://sites.google.com/view/jeevanapreethi/
ಇಲ್ಲಿನ ನೂರು ಚಿತ್ರ ಸಾರ ವಿಚಾರಗಳು ಮನದ ಪದೋಕ್ತಿಗಳು. ಇಲ್ಲಿ ವ್ಯಾಖ್ಯಾನ, ನಿರ್ದೇಶನ, ಕಾವ್ಯಮೀಮಾಂಸೆ,ಸಂಶೋಧನೆ ಮೊದಲಾದಂತೆ ಏನೂ ಇಲ್ಲ. ಅರ್ಥವಾದರೆ ಎಲ್ಲವೂ ಇರಬಹುದು.
ಈ ಬದುಕಿಗಾಗಿ ಎಷ್ಟೆಲ್ಲಾ ಶ್ರಮಿಸುತ್ತೇವೆ. ಸುಲಭಮಾರ್ಗದಲ್ಲಿ ಗೆಲುವನ್ನು ಹಂಬಲಿಸುತ್ತೇವೆ. ಕಾಣುವ ಕಥೆಯೆಲ್ಲಾ ಚಿತ್ರಕಥೆಯಲ್ಲ. ಜೊತೆಯಿಲ್ಲದ ಬನವನ್ನು ಭೇದಿಸಲು ನಾಲ್ಕು ದಿಕ್ಕು ಸುತ್ತುವ ನಮಗೆ, ಜೊತೆಯಿರುವ ಮನವು ಕಾಣಿಸುತ್ತಿಲ್ಲ. ಚಿಂತೆ, ನೋವು, ದುಃಖ, ಭಯ ಎಲ್ಲಕ್ಕೂ ಕಾರಣ ಈ ಮನಸ್ಸು.
ಮನಸ್ಸು ಅರ್ಥವಾಗದೆ, ಮಾಡಿದ ಕಾರ್ಯವೆಲ್ಲವೂ ವ್ಯರ್ಥ. ಮೊದಲು ನಮಗೆ ನಾವು ಅರ್ಥವಾಗಬೇಕಿದೆ. ನಾವು ಸಾಧಿಸಿರುವುದು ಯಾವ ರೀತಿಯ ನೆಮ್ಮದಿ ಪರಿಶೀಲಿಸಿಕೊಳ್ಳಬೇಕಿದೆ. ನಾವು ಇನ್ನೂ ನೆಮ್ಮದಿಯನ್ನು ಅರಸುತ್ತಿದ್ದೇವೆ ಎಂದರೆ ಮನಸ್ಸು ಹದಗೊಂಡಿಲ್ಲವೆಂದರ್ಥ. ನಮ್ಮೊಳಗಿನ ಸಖಸಖಿ ಭಾವವನ್ನು ತಿಳಿದು ತಿಳಿಗೊಳಿಸಬೇಕಿದೆ. ಅಂತಹ ಪ್ರಯತ್ನಕ್ಕೆ ಈ ಸಖಿ ಶಾರದೆ ನೆರವಾಗಬಹುದು. ಬಿಡುವಲ್ಲಿ ಓದಿ, ಸುಖಿಸಿ.
- ಅಂಕುರ
©2024 Book Brahma Private Limited.