ಶಾಂತಿಯ ಸೆಲೆ

Author : ಜಿ.ಎಸ್‌.ಕಲಾವತಿ ಮಧುಸೂದನ

Pages 152

₹ 150.00




Year of Publication: 2022
Published by: ಸ್ಪಂದನ ಸಿರಿ ಪ್ರಕಾಶನ
Address: #406, 11ನೇ ಅಡ್ಡ ರಸ್ತೆ, ಕುವೆಂಪುನಗರ, ಹಾಸನ-573201
Phone: 7204731877

Synopsys

‘ಶಾಂತಿಯ ಸೆಲೆ’ ಜಿ.ಎಸ್‌ ಕಲಾವತಿ ಮಧುಸೂದನ ಅವರ ವೈಚಾರಿಕ ಲೇಖನಗಳಸಂಗ್ರಹವಾಗಿದೆ. 'ಶಾಂತಿಯ ಸೆಲೆ' ಕೃತಿಗೆ ಮುನ್ನುಡಿ ತೋರಣ..! ಸಾಹಿತ್ಯ ಎಂಬುದು ಮಾನವನ ಮನಸ್ಸನ್ನು ಸಂಸ್ಕಾರಗೊಳಿಸುವ ಸಾಧನ. ಎಲ್ಲಾ ಲಲಿತಕಲೆಗಳಂತೆ ಸಾಹಿತ್ಯವೂ ಆನಂದಮಯ ಜಗತ್ತಿನತ್ತ ಕರೆದೊಯ್ಯುತ್ತದೆ. ಅಷ್ಟೇ ಅಲ್ಲದೇ ಹೃದಯವನ್ನೂ ಸಂಸ್ಕಾರಗೊಳಿಸಿ ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುತ್ತದೆ. ಆದ ಕಾರಣ ಮನುಷ್ಯ ತನ್ನ ಅಂತರಂಗದಲ್ಲಿ ಸಾಹಿತ್ಯವನ್ನು ಕುರಿತು ಧ್ಯಾನಿಸಲಾರಂಭಿಸಿದ. ತನ್ನ ಮನಸ್ಸಿನಲ್ಲಿ ಮೂಡುವ ಚಿಂತನೆಗಳಿಗೆ ಅಕ್ಷರ ರೂಪವನ್ನು ನೀಡಿ ಮುಂದಿನ ತಲೆಮಾರಿಗೆ ಆದುದರಿಂದ ಅಕ್ಷರಗಳು ತಲುಪಿಸುವ ಸಂಕಲ್ಪ ಮಾಡಿದ. ಕೇವಲ ಅಕ್ಷರಗಳಾಗದೇ ಅವು ಭಾಷೆಯಲ್ಲಿ ಪಡಿಮೂಡಿ ಮನುಷ್ಯನ ಅಂತ ರಂಗದ ಭಾವಲಹರಿಗೆ ಶಕ್ತಿಯನ್ನು ತುಂಬಿ ಪರಿಣಾಮ ಬೀರುವಲ್ಲಿ ಯಶಸ್ವಿಯಾದವು. ಕಾಲಪ್ರವಾಹದಲ್ಲಿ ಸಹಸ್ರಾರು ಚಿಂತಕರು ತಮ್ಮ ಚಿಂತನೆಗಳನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಅವರಲ್ಲಿ ಕೆಲವರ ಚಿಂತನೆಗಳು ಕಾಲಪ್ರವಾಹದಲ್ಲಿ ಗಟ್ಟಿಯಾಗಿ ಉಳಿದುಕೊಂಡು ಜನ ಮಾನಸವನ್ನು ರೂಪಿಸುವ ಅಕ್ಷರ ಕೆಲಸ ಮಾಡುತ್ತಲಿವೆ. ಹಾಗಾಗಿಯೇ ನಾಶವಲ್ಲದ್ದು ಎಂದು ಸಾರಸ್ವತ ಪ್ರಪಂಚ ಪರಿಭಾವಿಸುತ್ತಾ ಬಂದಿದೆ. ಆದರೆ ಯಾವುದು ನಾಶವಾಗದೇ ಇರುವುದೋ ಅದನ್ನು ಅಕ್ಷರ ಎಂದು ಕರೆದು ಅದಕ್ಕೆ ಗೌರವದ ಸ್ಥಾನವನ್ನು ನೀಡಲಾಗಿದೆ.

About the Author

ಜಿ.ಎಸ್‌.ಕಲಾವತಿ ಮಧುಸೂದನ

ಜಿ.ಎಸ್.ಕಲಾವತಿಮಧುಸೂದನ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನವರು. ತಂದೆ ಜಿ.ಆರ್.ಶ್ರೀನಿವಾಸಯ್ಯ,ತಾಯಿ ಕೆ.ಪಿ.ರಾಜಮ್ಮ. ಹಿಂದಿ ಭಾಷೆಯಲ್ಲಿ ಬಿ.ಎ, ಬಿ.ಇ.ಎಡ್‌,ಹಾಗೂ ಸಮಾಜಶಾಸ್ತ್ರದಲ್ಲಿ ಎಮ್‌.ಎ ಸ್ನಾತಕೋತರ ಪದವಿ ಪಡೆದಿದ್ದಾರೆ. ಅವರು ಪ್ರಾಥಮಿಕ, ಮಾಧ್ಯಮಿಕ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೋಘವಾಹಿನಿಯಲ್ಲಿ ನಿರ್ದೆಶಕಿಯಾಗಿ, ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಕಲರವ, ಸಂಕೀರ್ತನಮಾಲ, ಶೃತಿಮಾಲ,ಜೇನಹನಿ,ಅಂತರತಮ ನೀ ಗುರು, ಶ್ರೀರಂಗ ಮಹಾತ್ಮೆ ,ಸೌಗಂಧಿಕ, ಮಧುಲತೆ,ಬೆಳ್ಳಿಬಟ್ಟಲೊಳು, ಶ್ರೀ ಶ್ರವಣ ಕೀರ್ತನ,ಸ್ಪಂದನ ಸಿರಿ, ನೆನಪಿನ ಪಯಣ, ಸ್ಪಂದನ,ಅಪರಾಧಿ ನಾನಲ್ಲ . ಪ್ರಶಸ್ತಿಗಳು: “ಸಮಾಜ ಸೇವಾ” ಪ್ರಶಸ್ತಿ, “ಸಾಹಿತ್ಯ ಮತ್ತು ಸಾಂಸ್ಕೃತಿಕ ಭೂಷಣ”ಪ್ರಶಸ್ತಿ , ನಾರಿಶಕ್ತಿ ರಾಜ್ಯ ಪ್ರಶಸ್ತಿ, ‘ಮಹಿಳಾ ...

READ MORE

Related Books