ಧರ್ಮ-ದೇವರು, ಕುಲ ಗೋತ್ರ, ವಿಭಿನ್ನ ಆಚಾರ-ವಿಚಾರ, ಮೇಲು-ಕೀಳುಗಳ ಕುರಿತು ಸ್ಪಷ್ಟತೆಯನ್ನೊದಗಿಸುವ ಕೃತಿ ‘ಕಸವರಮೆಂಬುದು’. ಪೂರಕವಾಗಿ ‘ಪೆರಿಯಾರ ರಾಮಸ್ವಾಮಿ: ಸ್ವಾಭಿಮಾನಿ ಚಳವಳಿ, ಮಹಾತ್ಮಾಗಾಂಧಿ: ಮಹಿಳಾಪರ ಚಿಂತನಗಳು, ಅಂಬೇಡ್ಕರ ಮತ್ತು ಪತ್ರಿಕೋದ್ಯಮ, ಸ್ವಾಮಿ ವಿವೇಕಾನಂದ: ದರಿದ್ರನಾರಾಯಣ ಪರಿಕಲ್ಪನೆ, ಮೌಲ್ಯಪಲ್ಲಟಗಳು ಮತ್ತು ಸವಾಲುಗಳು, ಮಠಗಳು ಮತ್ತು ವೈಚಾರಿಕತೆ, ಸಾಹಿತ್ಯ ಮತ್ತು ಶಿಕ್ಷಣ’ ಮುಂತಾದ ಬರಹಗಳ ಮೂಲಕ ಲೇಖಕ ಚನ್ನಪ್ಪ ಕಟ್ಟಿ ಅವರು ತಮ್ಮ ಚಿಂತನೆಗಳ ಸಮಗ್ರತೆಯನ್ನು ಕಟ್ಟಿಕೊಟ್ಟಿದ್ದಾರೆ.
ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...
READ MORE