‘ವೇದಕ್ಕೆ ಒರೆಯ ಕಟ್ಟುವೆ’ ಕೃತಿಯು ಜೆ. ಎಸ್ ಪಾಟೀಲ ಅವರ ಜೀವನಪರ-ಜನಪರ ಹಾಗೂ ಉದಾತ್ತ ವೈಚಾರಿಕ ಚಿಂತನೆಗಳನ್ನು ಒಳಗೊಂಡಂತಹ ಲೇಖನಗಳ ಸಂಕಲನವಾಗಿದೆ. ಈ ಕೃತಿಯೊಳಗಿನ ಕೆಲವೊಂದು ವಿಚಾರಗಳು ಹೀಗಿವೆ: ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಸನಾತನತೆ ಮತ್ತು ವೈಚಾರಿಕತೆಗಳ ಮಧ್ಯೆ ನಿರಂತರ ತಿಕ್ಕಾಟಗಳು, ನಡೆಯುತ್ತಲೇ ಬಂದಿವೆ. ಅದಕ್ಕೆ ಹೆಚ್ಚು ತೀವ್ರತೆ ಉಂಟಾದುದು ಹನ್ನೆರಡನೇ ಶತಮಾನದಲ್ಲಿ ಶಿವಶರಣರು ನಡೆಸಿದ ಸಮಾಜೋ- ಧಾರ್ಮಿಕ ಸಮಗ್ರ ಕ್ರಾಂತಿಯ ಸಂದರ್ಭಧಲ್ಲಿ ಸನಾತನ ಧರ್ಮ ಪೋಷಿಸಿಕೊಂಡು ಬಂದ ಬಹು ಮುಖ್ಯ ಧರ್ಮವೆಂದರೆ ಯಜ್ಞಯಾಗ ಕರ್ಮ, ಬಹುದೇಪೋಪಾಸನೆ ಚಾರ್ತುವರ್ಣ ಪದ್ದತಿ, ಇದರಿಂದಾಗಿ ಜೀವಹಿಂಸೆ, ಕಂದಾಚಾರ ವರ್ಣಭೇದ ವ್ಯವಸ್ಥೆ ಶೋಷಣೆ ಇದೇ ಮೊದಲಾದ ಜೀವ ವಿರೋಧಿ, ಅಮಾನವೀಯ ವಿಧಿ ನಿಯಮ, ಕಟ್ಟುಪಾಡುಗಳು ಹುಟ್ಟಿಕೊಂಡವು; ಗಟ್ಟಿಗೊಂಡವು, ಅವೇ ಬಹುಕಾಲ ಮಾನವ ಬದುಕನ್ನು ನಿಯಂತ್ರಿಸುತ್ತಾ ಬಂದವು, ಅವೇ ಸತ್ಯ ಎಂಬ ಭ್ರಮೆಯಲ್ಲಿ ಮನುಷ್ಯ ಬದುಕುವಂತೆ ಮಾಡಿದವು. ಶರಣಧರ್ಮ ವೈಚಾರಿಕ ತಳಹದಿಯ ಮೇಲೆ ನಿರ್ಮಾಣವಾದ ಜೀವ ಕಾರುಣ್ಯದ ಸರ್ವಸಮಾನತೆಯ ಮೌಲ್ಯಗಳನ್ನು ಉಸಿರಾಗಿಸಿಕೊಂಡ ಸ್ವತಂತ್ರ ಧರ್ಮ, ಸಕಲ ಜೀವಾತ್ಮರ ಲೇಸು ಅದರ ಚರಮ ಸಿದ್ದಿ. ಈ ಎರಡರ ರೀತಿ ನೀತಿ ತದ್ವಿರುದ್ಧ ಎರಡರ ನೆಲೆ ನಿಲುವು ಅಜಗಜಾಂತರ. ಒಂದು ಉತ್ತರ ಮತ್ತೊಂದು ದಕ್ಷಿಣ .ಹೀಗಿರುವಾಗ ಉಭಯ ವಿರೋಧಿಗಳನ್ನು ಮುಖಾಮುಖಿಯಾಗಿಸಿ ನಿಜ ಮಾನವ ಧರ್ಮದ ದರ್ಶನವನ್ನು ಮಾಡಿಸಲು ಕೈಕೊಂಡ ಪ್ರಯತ್ನ ಪ್ರಸ್ತುತ ಕೃತಿಯಲ್ಲಿ ಸಮರ್ಥವಾಗಿ ದಾಖಲಾಗಿದೆ ಎಂಬುದನ್ನು ಈ ಕೃತಿಯು ವಿಶ್ಲೇಷಿಸುತ್ತದೆ.
"ವೇದಕ್ಕೆ ವರೆಯ ಕಟ್ಟುವೆ" ಕೃತಿ ಪರಿಚಯ.
©2024 Book Brahma Private Limited.