ಆಚಾರವೇ ಸ್ವರ್ಗ-ಅನಾಚಾರವೇ ನರಕ, ದಯವೇ ಧರ್ಮದ ಮೂಲವಯ್ಯಾ, ಕಳಬೇಡ- ಕೊಲಬೇಡವೆಂದು ನುಡಿದಂತೆ ನಡೆದವರು ಕ್ರಾಂತಿ ಪುರುಷ ಬಸವಣ್ಣ. ಅವರ ತಪ್ತದಲ್ಲಿ ದೇವರ ಮಿಡಿತ ಹೇಗಿತ್ತು? ಯಾವುದಾಗಿದ್ದಿರಬಹುದು ಎಂಬುದನ್ನು ಅವರ ವಚನಗಳ ಮೂಲಕ ಶೋಧಿಸುವ ಕೃತಿ ‘ಬಸವಣ್ಣನವರ ದೇವರು’.ಕರ್ತೃ ರಂಜಾನ್ ದರ್ಗಾ.
ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ಪ್ರಶಸ್ತಿಗಳು: 2022ನೇ ಸಾಲಿನ ಕರ್ನಾಟಕ ...
READ MOREಹೊಸತು- ಸೆಪ್ಟೆಂಬರ್-2005
ಹನ್ನೆರಡನೆಯ ಶತಕದಲ್ಲಿ ಬಸವಣ್ಣ ಬುದ್ಧನಂತೆ ಸಾಮಾನ್ಯ ಜನರಲ್ಲಿ ಆತ್ಮಶಕ್ತಿಯನ್ನು, ವೈಚಾರಿಕತೆಯನ್ನು ಪ್ರಚೋದಿಸಿ ದವರು. ಅವರು ದೇವರ ಬಗ್ಗೆ ಬರೆದ ವಚನಗಳನ್ನು ರಂಜಾನ್ ದರ್ಗಾ ಅವರು ಶ್ರದ್ಧೆಯಿಂದ ಪರಿಶೀಲಿಸಿ, ಅಲ್ಲಿನ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ಬಸವಣ್ಣನವರ ಕೆಲವು ವಚನಗಳು ಕಾವ್ಯದ ದೃಷ್ಟಿಯಿಂದ ಮುಖ್ಯವೆನಿಸಿ ಜನಪ್ರಿಯವಾಗಿವೆ. ಆದರೆ ಇನ್ನೆಷ್ಟೋ ವಚನಗಳು ಸಾಮಾಜಿಕ ಚಿಂತನೆಗಳ ದೃಷ್ಟಿಯಿಂದ ಬಹಳ ಮುಖ್ಯವಾಗಿವೆ. ಬಸವಣ್ಣನವರ ದೇವರ ಕಲ್ಪನೆ ಕಾಯವೆಂಬ ಕೈಲಾಸದಲ್ಲಿರುವ ಸಂಗತಿಯನ್ನು ದರ್ಗಾ, ಅವರು ಹಲವು ವಚನಗಳ ಮೂಲಕ ಸಮರ್ಥಿಸಿದ್ದಾರೆ. ಕೆಲವು ಕಡೆ ಆಧುನಿಕ ಚಿಂತನೆಗಳನ್ನು ವಚನಗಳಿಗೆ ಆರೋಪಿಸಿರುವುದು ಕಂಡುಬರುತ್ತದೆ. ಅರ್ಥಶಾಸ್ತ್ರದ ದೃಷ್ಟಿಯಿಂದ ವಚನಗಳ ವಿಶ್ಲೇಷಣೆ ಒಂದು ಅಧ್ಯಾಯದಲ್ಲಿ ಕಾಣುತ್ತದೆ. ಬಸವಣ್ಣನವರ ವಚನಗಳ ಚಿಂತನೆ ಇಂದಿಗೂ ಪ್ರಸ್ತುತ ಎಂಬುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ.