ಲೇಖಕ ಎನ್. ಶಂಕರಪ್ಪ ತೋರಣಗಲ್ಲು ಅವರು ರಚಿಸಿದ ಕೃತಿ-ಭಗವದ್ಗೀತೆ ಬೆಳಕು ನೀಡುವುದೇ?. ಹಿಂದೂ ಸನಾತನ ಪರಂಪರೆಯಲ್ಲಿ ಭಗವದ್ಗೀತೆಗೆ ಉನ್ನತ ಸ್ಥಾನವಿದೆ. ಧಾರ್ಮಿಕ ಮಾತ್ರವಲ್ಲ; ಇಲ್ಲಿಯ ತತ್ವ-ನಿಯಮಗಳನ್ನು ಬದುಕಿನ ಭಾಗವಾಗಿಯೂ ಪಾಲಿಸುವ ಪರಿಪಾಠವೂ ಇದೆ. ಬಹುತೇಕ ಜನರು ತಮ್ಮ ಸಂಕಲ್ಪ ಶಕ್ತಿಯ ಮೂಲ ಎಂದೂ ಪರಿಗಣಿಸುವವರಿದ್ದಾರೆ. ಕುರುಕ್ಷೇತ್ರ ಯುದ್ಧ ನಡೆದಾಗ ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಬೋಧಿಸುವ ಪಠ್ಯ ಇಲ್ಲಿದೆ. ಯುದ್ಧರಂಗದಲ್ಲಿ ಮಾತ್ರ ಅನ್ವಯಿಸುವ ನಿಯಮಗಳು ಮಾತ್ರವಲ್ಲ; ಬದುಕಿನ ಎಲ್ಲ ರಂಗಗಳಲ್ಲಿಯೂ ಅನ್ವಯವಾಗುತ್ತವೆ. ಇಂತಹ ಜಿಜ್ಞಾಸೆಯನ್ನು ಈ ಕೃತಿಯಲ್ಲಿ ಕಾಣಬಹುದು.
ಲೇಖಕ ಎನ್ ಶಂಕರಪ್ಪ ತೋರಣಗಲ್ಲು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಸಮಾಲೋಚಕ ಇಂಜಿನಿಯರ್ ಆಗಿದ್ದಾರೆ. ಕೃತಿಗಳು: ಸ್ವಾಮಿ ವಿವೇಕಾನಂದ ; ಕಪ್ಪು ಬಿಳುಪು (ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ), ವಿಜ್ಞಾನ- ಏನು? ಹೇಗೆ? , ಸಂಗಂ - ತಮಿಳಗಂ, ಲಿಪಿ ನಿಗೂಢ, ಭಗವದ್ಗೀತೆ ಬೆಳಕು ನೀಡುವುದೇ?, ವಾಸ್ತು ಎಂಬ ವ್ಯಾಧಿ, ತಂತ್ರಜ್ಞಾನದ ದೇಸೀಕರಣ- ಕನ್ನಡದ ಜಾಗತೀಕರಣ, ಹಳಗನ್ನಡ- ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ .ಆರ್ಯರು ಯಾರು ? ...
READ MORE