ಪತ್ರಕರ್ತರೂ, ಸಾಮಾಜಿಕ ಹೋರಾಟಗಾರರೂ ಆದ ಗಣೇಶ ಬೆಳ್ಳಿ ಅವರು ’ಕಾಗೆ ಬಂಗಾರ’ ಪುಸ್ತಕವನ್ನು ಹೊರತಂದಿದ್ದಾರೆ.
ಸಮಾಜದ ಅನೇಕ ಮುಖಗಳನ್ನು ಗಮನಿಸುತ್ತಾ ಜೀವನದ ಹೋರಾಟದಲ್ಲಿ ಅವರ ಆಸಕ್ತಿ ಮತ್ತು ಮನುಷ್ಯ – ಮನುಷ್ಯನ ನಡುವಿನ ಮಾನಸಿಕ ತುಮುಲಗಳ ವ್ಯತ್ಯಾಸವನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಆಧ್ಯಾತ್ಮ ಮತ್ತು ವಿಜ್ಞಾನಗಳು ಉತ್ತರಿಸಲಾಗದ ಎಷ್ಟೋ ವಿಷಯಗಳು ಈ ಪ್ರಕೃತಿಯಲ್ಲಿಅಡಗಿವೆ. ಅವುಗಳನ್ನು ಪ್ರಶ್ನಿಸುವ ಮೂಲಕ ಗಣೇಶ ಬೆಳ್ಳಿಯವರು ಯಾವುದೇ ಪಂಥವನ್ನು ಅನುಸರಿಸದೇ ನೇರವಾಗಿ ನಿರೂಪಿಸಿದ್ದಾರೆ. ಲೇಖಕರ ಆಧ್ಯಾತ್ಮಿಕ ಚಿಂತನೆಗಳು ನಿಜಕ್ಕೂ ಇವರನ್ನು ಒಬ್ಬ ಸಾಧಕನ ಸಮೀಪ ನಿಲ್ಲಿಸುತ್ತವೆ. ಇಂದಿನ ವಿಜ್ಞಾನ ಯುಗದಲ್ಲಿ ಅವುಗಳನ್ನು ಆಧ್ಯಾತ್ಮದೊಂದಿಗೆ ಸಮೀಕರಣಗೊಳಿಸಿ ಅಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ಈ ಪುಸ್ತಕದಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.