ಬುದ್ಧ ಮತ್ತು ಕಾರ್ಲ್ ಮಾರ್ಕ್ಸ ಅವರ ವಿಚಾರಧಾರೆಗಳ ಸಾಮ್ಯತೆ ಹಾಗೂ ಕೆಲ ವಿರೋಧಾಭಾಸಗಳ ತೌಲನಿಕ ಅಧ್ಗಯನದ ಕೃತಿ-’ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್’. ಜೊತೆಗೆ ಸಾವಿತ್ರಿಬಾಯಿ ಫುಲೆ, ಬಸವಣ್ಣ, ವಿವೇಕಾನಂದ ಹಾಗೂ ಅಂಬೇಡ್ಕರ್ ಅವರ ವಿಚಾರಗಳ ತುಲನೆಯೂ ಮಾಡಲಾಗಿದೆ. ಅಂಬೇಡ್ಕರ್ ಕಂಡ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್’ ಮೊದಲ ಲೇಖನವು ಬುದ್ಧ -ಮಾರ್ಕ್ಸ ತತ್ವಗಳು, ಸಾಧನೆಗಳು, ಸತ್ಯಗಳು ಇತ್ಯಾದಿ ಕುರಿತು ತರ್ಕಿಸಿದ್ದರೆ, ’ಬಸವಣ್ಣನವರು ಕಂಡ ಭಾರತೀಯ ಸಮಾಜ ಮತ್ತು ಅಸ್ಪ್ರಶ್ಯರು’ ಹಾಗೂ ಸ್ವಾಮಿ ವಿವೇಕಾನಂದರಳೊಗೊಬ್ಬ ಮನು’ ಹೀಗೆ ಅವರ ವಿಚಾರಗಳನ್ನುಇಲ್ಲಿ ತರ್ಕಕ್ಕೆ ಒಳಪಡಿಸಲಾಗಿದೆ.
ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...
READ MORE