ಜಿ.ಬಿ. ಹರೀಶ ಅವರ ಸಂಪಾದಿತ ಕೃತಿ-ರಾಜೀವ್ ಮಲ್ಹೋತ್ರ: ವಿಚಾರಧಾರೆ. ಪಾಶ್ಚಾತ್ಯ ಬೌದ್ಧಿಕತೆಯ ಹುನ್ನಾರಗಳ ಹೂರಣವನ್ನು ಬಯಲಿಗೆಳೆದ ಲೇಖನಗಳ ಸಂಗ್ರಹ ಕೃತಿ. ಭಾರತೀಯ ಸಂಸ್ಕೃತಿಗೆ ತನ್ನದೇ ಆದ ಪ್ರಾಚೀನತೆ ಇದೆ. ಆದರೆ, ಪಾಶ್ಚಾತ್ಯ ಸಂಸ್ಕೃತಿಯ ಬೇರು ಆಳಕ್ಕಿಲ್ಲದಿದ್ದರೂ ಅದೇ ಸರ್ವ ಶ್ರೇಷ್ಠ ಎಂಬ ಭಾವನೆ ಮೂಡಿಸುವ ಶಿಕ್ಷಣವನ್ನು ವಿರೋಧಿಸುವ ಚಿಂತನೆಗಳ ಸರಣಿಯನ್ನು ಇಲ್ಲಿಯ ಲೇಖನಗಳಲ್ಲಿ ಕಾಣಬಹುದು. ಭಾರತೀಯ ಚಿಂತನೆಗಳ ಉನ್ನತಿಯನ್ನು, ಸರ್ವಶ್ರೇಷ್ಠತೆಯನ್ನು ತಿಳಿಯಬಹುದು. ರಾಜೀವ್ ಮಲ್ಹೋತ್ರ ಅವರ ವಿಚಾರಗಳನ್ನು ಇಲ್ಲಿ ಅಧ್ಯಯನದ ಶಿಸ್ತಿಗೆ ಒಳಪಡಿಸಿದೆ.
ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...
READ MORE