ಗದುಗಿನ ಲಡಾಯಿ ಪ್ರಕಾಶನವು 'ಲಿಂಗಾಯತ ದರ್ಶನ ಮಾಲೆ' ಅಡಿಯಲ್ಲಿ ಪ್ರಕಟಿಸಿದ ನಾಲ್ಕನೇ ಪುಸ್ತಕ ’ಲಿಂಗಾಯತ ತತ್ವ ಪ್ರಣಾಳಿಕೆ’. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯ ಸಂದರ್ಭದಲ್ಲಿ ಲಿಂಗಾಯತ ಧರ್ಮದ ತಾತ್ವಿಕತೆ ಕುರಿತು ಚರ್ಚೆ ನಡೆಯಿತು. ಚರ್ಚೆಗೆ ಪೂರಕವಾಗಿ ಹಿರಿಯ ವಿದ್ವಾಂಸ ಟಿ.ಆರ್. ಚಂದ್ರಶೇಖರ ಅವರು ಲಿಂಗಾಯತ ಧರ್ಮದ ತತ್ವ ಹಾಗೂ ಪ್ರಣಾಳಿಕೆಯ ಸ್ವರೂಪವನ್ನು ಈ ಗ್ರಂಥದಲ್ಲಿ ಕಟ್ಟಿದ್ದಾರೆ. ಲಿಂಗಾಯತರು ಏಕೆ ಪ್ರತ್ಯೇಕ ಧರ್ಮಕ್ಕಾಗಿ ಬೇಡಿಕೆ ಮುಂದಿಡುತ್ತಿದ್ದಾರೆ ಎಂದು ತಿಳಿದುಕೊಳ್ಳ ಬಯಸುವವರಿಗೆ ಈ ಪುಸ್ತಕ ವಿವರವಾದ ಮಾಹಿತಿ ಒದಗಿಸುತ್ತದೆ.
'ಡಾ.ಎಂ.ಚಿದಾನಂದಮೂರ್ತಿ ಅವರ ಹಿಂದೂ-ವೀರಶೈವ ಮೀಮಾಂಸೆ', 'ಲಿಂಗಾಯತ ಧರ್ಮದಲ್ಲಿನ ಎಡಪಂಥೀಯ ಚಿಂತನೆ' ಎಂಬ ಬರೆಹಗಳಿವೆ.
ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್. ಚಂದ್ರಶೇಖರ್ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...
READ MORE