ಭಗವದ್ಗೀತೆಯಂತಹ ಕೃತಿಗಳು ವಯೋವೃದ್ಧರು ಓದುವಂತಹವು ಎಂದು ಮೂಗು ಮುರಿಯುವ ಸಂದರ್ಭಗಳು ಇರುವಾಗಲೇ ಹೊಸಪೀಳಿಗೆಗೆ ಗೀತೆಯನ್ನು ದಾಟಿಸುವ ಯತ್ನ ಮಾಡಿದ್ದಾರೆ ಲೇಖಕ ಯತಿರಾಜ್ ವೀರಾಂಬಧಿ. ಕರ್ಮ, ಧರ್ಮ, ಪ್ರೇಮದ ಮೂಲಕ ಸುಖಜೀವನಕ್ಕೆ ಹದಿನೆಂಟು ಸೂತ್ರಗಳನ್ನು ಹೆಣೆಯುವ ಕೃತಿ ’ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು’.
ಭಗವದ್ಗೀತೆಯ ಮಾನವೀಯ ಗುಣ, ವರ್ತನೆಗಳನ್ನು ಆಧರಿಸಿ ಕೃತಿ ರಚನೆಯಾಗಿದೆ. ಹೊಸ ಚಿಗುರಾದ ಯುವಜನರಿಗೆ ಹಳೆಬೇರಾದ ಭಗವದ್ಗೀತೆಯನ್ನು ಮುಟ್ಟಿಸುವ ಕೃತಿ ಗೃಹಿಣಿಯರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಹೆಚ್ಚು ಉಪಯುಕ್ತ.
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE