ವಿಷ್ಣು ಜೋಷಿ ಅವರ ‘ವಾಲ್ಮೀಕಿ ರಾಮಾಯಣ ಅಂತರಂಗ ಶೋಧ’ ಕೃತಿಯು ವೈಚಾರಿಕ ಲೇಖನಗಳ ಸಂಗ್ರಹವಾಗಿದೆ. ಪ್ರಸ್ತುತ ಪುಸ್ತಕ ವಾಲ್ಮೀಕಿ ರಾಮಾಯಣದ ಒಳ ನೋಟಗಳನ್ನು ಹಿಡಿದಿಡುವ ಕೃತಿಯಾಗಿದೆ. ಇದು ಕಥನ ಪ್ರಧಾನ ಕೃತಿಯಲ್ಲ ಸಂಸ್ಕೃತಿ ಪ್ರಧಾನವಾದ ಕೃತಿ. ಹಲವರ ಗಮನಕ್ಕೆ ಬಾರದೆ ಹೋಗಿಬಿಡುವ, ರಾಮಾಯಣದ ವಿವಿಧ ಮುಖಗಳನ್ನು ಪರಿಚಯಿಸುವ ಈ ಕೃತಿ ಮೊದಲು: 'ಕರ್ಮವೀರ' ಸಾಪ್ತಾಹಿಕದಲ್ಲಿ ಲೇಖನ ಮಾಲೆಯಾಗಿ ಪ್ರಕಟವಾಗಿತ್ತು. ಅಂತರಂಗದ ತರಂಗಗಳು ಶೀರ್ಷಿಕೆಯಡಿಯಲ್ಲಿ ರಾಮಾಯಣದಲ್ಲಿ ಆಡಳಿತ ನಿರ್ವಹಣೆ, ರಾಮಾಯಾಣದಲ್ಲಿ ಶರೀರ ಸೌಷ್ಠವ, ರಾಮಾಯಣದಲ್ಲಿ ಹಾಸ್ಯ, ರಾಮಾಯಣದಲ್ಲಿ ಗೃಹಲಂಕಾರ, ಆಭರಣ, ಲೇಪನ, ರಾಮಾಯಣದಲ್ಲಿ ಶಕುನ ಹಾಗೂ ಸ್ವಪ್ನ, ರಾಮಾಯಣದಲ್ಲಿ ಶಾಪ, ರಾಮಾಣದಲ್ಲಿ ವೃಕ್ಷಸಂಪತ್ತು ಮತ್ತು ಗಿಡಮೂಲಿಕೆ, ರಾಮಾಯಣದಲ್ಲಿ ರಾಜನೀತಿ, ರಾಮಾಯಣದಲ್ಲಿ ವಿವಿಧ ವೃತ್ತಿಯವರು, ರಾಮಾಯಣದಲ್ಲಿ ಪ್ರಾಣಿ ಪ್ರಪಂಚ, ರಾಮಾಯಣದಲ್ಲಿ ಅಮಾತ್ಯರು, ರಾಮಾಯಣದಲ್ಲಿ ಅಸ್ತ್ರಗಳು ಹಾಗೂ ಶಸ್ತ್ರಗಳು ಹಾಗೂ ವಾಲ್ಮೀಕಿ ಕಂಡಂತೆ ಜೀವನವು ಒಳಗೊಂಡಿದೆ.
ವಿಷ್ಣು ಜೋಷಿ ಅವರು ಮೂಲತಃ ಕುಮಟಾ ತಾಲೂಕಿನ ಕಲ್ಲಬ್ಬಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಕನ್ನಡ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರು. ಕುಮಟಾದ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಹಿರಿಯ ಶ್ರೇಣಿಯ ಉಪನ್ಯಾಸಕರಾಗಿದ್ದಾರೆ. ಅಸ್ಖಲಿತ ಸಾಂಸ್ಕೃತಿಕ ವಾಗ್ಮಿಗಳು. ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ಭಗವದ್ಗೀತೆ, ಭಾಗವತ, ಸಂಸ್ಕೃತ ಕಾವ್ಯ ಮತ್ತು ನಾಟಕಗಳ ಬಗ್ಗೆ ನಾಡಿನಾದ್ಯಂತ ಉಪನ್ಯಾಸ ನೀಡಿದ್ದಾರೆ. ಕೃತಿಗಳು: ಮಂದಾರ(ಕವನಸಂಕಲನ), ಕನ್ನಡ ಮೇಘದೂತ, ಕನ್ನಡ ಕುಮಾರ ಸಂಭದ, ಪದ್ಯಾನುವಾದಗಳು, ದರ್ಶನ ಸಂಗ್ರಹ, ಸಾಂಖ್ಯಕಾರಿಕಾ, ಸಂಸ್ಕೃತ ಸಾಹಿತ್ಯ ಪ್ರವೇಶ(ಪಠ್ಯ), ಭಾಸ ಕವಿಯ ಸುಭಾಷಿತಗಳು, ...
READ MORE