ಲೇಖಕ ಮಂಜುನಾಥ್ ಉಲವತ್ತಿ ಶೆಟ್ಟರ್ ಅವರು ಬರೆದ ವೈಚಾರಿಕ ಲೇಖನಗಳ ಸಂಕಲನ-ಎಪ್ಪತ್ತರ ಹರೆಯದ ನನ್ನ ದೇಶ-2. ಕಳೆದ ಮೂರು ವರ್ಷದ ಅವಧಿಯಲ್ಲಿ ರಾಜ್ಯದ ವಿವಿಧ ಪ್ರಮುಖ ದಿನಪತ್ರಿಕೆಗಳ್ಳಿ ಪ್ರಕಟಿತ ವೈಚಾರಿಕ ಲೇಖನಗಳನ್ನು ಸಂಗ್ರಹಿಸಿದ್ದು, ಇಲ್ಲಿಯ ಬರಹಗಳು ತತ್ಕಾಲೀನತೆಯನ್ನು ದಾಟಿ ಒಂದು ಸ್ಪಂದನಶೀಲ ತಾತ್ವಿಕತೆಯೆಡೆಗೆ ತುಡಿಯುತ್ತವೆ. ಭಾರತವು ಜಾಗತೀಕರಣವನ್ನು ಒಪ್ಪಿ ಕಾರ್ಯಗತವಾದ ಮೇಲೆ ದೇಶದ ಎಲ್ಲಾ ವಲಯಗಳ ಮೇಲಾದ ಪ್ರಭಾವ, ಮುಖ್ಯವಾಗಿ ನಮ್ಮ ದೇಶದ ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯ ವಾಸ್ತವತೆಯನ್ನು ಕೇಂದ್ರವಾಗಿಸಿದ ಲೇಖನಗಳು ಇವೆ. ಕಳೆದ 20 ವರ್ಷಗಳಲ್ಲಿ ಗತಿಸಿದ ರಾಜಕೀಯ ಭ್ರಷ್ಟಾಚಾರ, ಹೇಯ ಕೃತಕ ವ್ಯವಸ್ಥೆಯ ಹಿಂದಿನ ತಾತ್ವಿಕ ದಿವಾಳಿಕೋರತನ ಸೂಚಿಸುವ, ರಾಜಕೀಯವೆಂಬುದು ಸೇವೆಯಾಗದೇ ವಾಣಿಜ್ಯಕರಣಗೊಂಡು ರಾಜಕೀಯ ಶೀಲವಂತಿಕೆಯ ಅವನತಿಯ ಕಾರಣಗಳನ್ನು ಗುರುತಿಸುವ ಪ್ರಯತ್ನದ ಬರಹಗಳು ಇವೆ. ಕಳೆದ ವಿದ್ಯಾರ್ಥಿ ಬದುಕಿನಿಂದ ಇಲ್ಲಿಯವರೆಗೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿದ್ಯಮಾನಗಳ ವಿಶ್ಲೇಷಣಾತ್ಮಕ ಪ್ರಸ್ತುತಿಗಳೆಂದು ವರ್ಗೀಕರಿಸಿ, ಬರಹಗಳ ಚಿಂತನೆಯನ್ನು ವರ್ಗೀಕರಿಸಿ ಅಧ್ಯಯನಕ್ಕೆ ಹಚ್ಚುವ, ಪ್ರೇರಣಾತ್ಮಕ ಬರಹಗಳನ್ನು ಈ ಕೃತಿಯು ಒಳಗೊಂಡಿದೆ.
ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿಯವರು. ತಂದೆ ರೇವಣಸಿದ್ದಪ್ಪ, ತಾಯಿ ನಾಗಮ್ಮ. ಲೇಖಕರು ಎಂ.ಎ, ಎಂ,ಫಿಲ್ ಪದವೀಧರರು. ಬಳ್ಳಾರಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರು. ಆರ್ಥಿಕ, ಪ್ರಚಲಿತ, ವೈಚಾರಿಕ, ವೈಜ್ಞಾನಿಕ, ಸಾಮಾಜಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸಹಪ್ರಾಧ್ಯಾಪಕರು. ಪ್ರಸ್ತುತ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವ್ಯಾಸಂಗ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲಾ ಪ್ರಗತಿಪರ ಚಿಂತಕರ ಒಕ್ಕೂಟದಲ್ಲಿದ್ದು, ಸೆಮಿನಾರ್, ವಿಶೇಷ ಉಪನ್ಯಾಸಗಳನ್ನು ನೀಡಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ...
READ MORE