ತುಂಬಿದ ಹೊಳೆ

Author : ವೈ.ಬಿ. ಕಡಕೋಳ

Pages 404

₹ 400.00




Year of Publication: 2021
Published by: ಎಸ್.ಎಲ್.ಎನ್. ಪಬ್ಲಿಕೇಷನ್
Address: # 3437,(ನೆಲಮಾಳಿಗೆ) 4ನೇ ಮುಖ್ಯರಸ್ತೆ, 9ನೇ ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು-28
Phone: 9972129376

Synopsys

`ತುಂಬಿದಹೊಳೆ’ ಲೇಖಕ ವೈ.ಬಿ.ಕಡಕೋಳ ಅವರ ಲೇಖನಗಳ ಸಂಗ್ರಹ ಕೃತಿ. ಒಟ್ಟು 62 ಲೇಖನಗಳು ಸಂಕಲನಗೊಂಡಿವೆ. ಮೊದಲ ವಿಭಾಗ ‘ಜೀವನಶೈಲಿ’ಯಲ್ಲಿ 13 ಲೇಖನಗಳಿವೆ. ನೆರೆಹೊರೆಯವರೊಂದಿಗೆ ಹೇಗಿರಬೇಕು? ಎಂಬುದರಿಂದ ಹಿಡಿದು ವೃದ್ದಾಪ್ಯದವರಗಿನ ಲೇಖನಗಳಿವೆ. ಆಧುನಿಕ ಜೀವನ ಶೈಲಿಯ ವಿಧಾನಗಳು, ಸಲಹೆ, ಸೂಚನೆ, ರಕ್ಷಣೆ, ಆರೋಗ್ಯವಂತ ಸಮಾಜದ ಚಹರೆಗಳನ್ನು ಪರಿಚಯಿಸಲಾಗಿದೆ. ಕಾಯಕದ ಮಹತ್ವ, ನಗುವಿನ ಲಕ್ಷಣ, ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಹೀಗೆ ವಿವಿಧ ವಿಷಯಗಳನ್ನು ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಚರ್ಚಿಸಲಾಗಿದೆ. ‘ಶಿಕ್ಷಣ’ ಎಂಬ ಎರಡನೆಯ ವಿಭಾಗದಲ್ಲಿ ನಮ್ಮ ರಾಷ್ಟ್ರಧ್ವಜ, ನನ್ನ ಗುರುಗಳು ಹೀಗೆ 13 ಲೇಖನಗಳಿವೆ. ಸಮನ್ವಯ ಶಿಕ್ಷಣ, ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣ, ಸೃಜನಶೀಲತೆ ಕುರಿತು ತಾರ್ಕಿಕ ನೆಲೆಯಲ್ಲಿ ಚಿಂತಿಸಲಾಗಿದೆ. ‘ಲಹರಿ’ ಎಂಬ 3ನೇ ವಿಭಾಗದಲ್ಲಿ ನಾಲ್ಕು ಲೇಖನಗಳಿವೆ. ವಾಸ್ತವಿಕ ವಿಚಾರಗಳು ತಿಳಿಹಾಸ್ಯದ ನೆಲೆಯಲ್ಲಿ ಹರಡಿವೆ. ‘ಜನಪದ’ ಎಂಬ 4ನೇ ವಿಭಾಗದಲ್ಲಿ ನಾಲ್ಕು ಲೇಖನಗಳಿವೆ. ಬೀಸುವ, ಬುಡಬುಡಕೆ, ಹೆಳವರ ಜೀವನ ವಿಧಾನವನ್ನು ಕಟ್ಟಿಕೊಟ್ಟಿದ್ದಾರೆ. ‘ನಮ್ಮ ಸುತ್ತ ಮುತ್ತ’ 5ನೇ ವಿಭಾಗದಲ್ಲಿ ಸವದತ್ತಿ ತಾಲೂಕಿನ ದೇವಿ ಆರಾಧನೆಯ ತಾಣಗಳನ್ನು (ರಟ್ಟರು, ಮುನವಳ್ಳಿ ಶಾಸನ ಹಿನ್ನೆಯಲ್ಲಿ) ಐತಿಹಾಸಿಕ ನೆಲೆಯ ಬರಹಗಳಿವೆ. ‘ಮುಕ್ತ-ಮುಕ್ತ’ ಎಂಬ 6ನೇ ಅಧ್ಯಾಯದಲ್ಲಿ ವಚನ ನಿರ್ವಚನ, ಆಲಮಟ್ಟಿಯಲ್ಲಿ ಶೈಕ್ಷಣಿಕ ಸಮ್ಮೇಳನದ ಸವಿನೆನಪು ಹೀಗೆ ಒಟ್ಟು 23 ಲೇಖನಗಳಿವೆ.

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ವಿ.ಬಿ. ಸಣ್ಣಸಕ್ಕರಗೌಡರ ‘ಲೇಖಕರದ್ದು ನೆಲಮೂಲ ಸಂಸ್ಕೃತಿ. ಬೆವರು ಸಂಸ್ಕೃತಿಯ ಬಲಕ್ಕೆ ಬಲವಾಗಿ ಅಪ್ಪಿಕೊಂಡು ಅಂದದ-ಚೆಂದದ ಬರಹವನ್ನು ನೀಡಿದ್ದಾರೆ. ಜನಪ್ರಿಯತೆ ಎಂಬ ಬೇತಾಳನ ಬೆನ್ನಿಗೆ ಬೀಳದೇ, ನೈಜತೆಯಿಂದ ಕೂಡಿದ, ಶಬ್ದಾಡಂಬರವಿಲ್ಲದ, ಸಹಜ, ಸರಳ ನಿರೂಪಣೆಯಿಂದ ಇಲ್ಲಿಯ ಬರಹಗಳು ಗಮನ ಸೆಳೆಯುತ್ತವೆ’ ಎಂದು ಪ್ರಶಂಸಿಸಿದ್ದಾರೆ.

About the Author

ವೈ.ಬಿ. ಕಡಕೋಳ

ಲೇಖಕ ವೈ.ಬಿ.ಕಡಕೋಳ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು.ಸವದತ್ತಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಸರಕಾರಿ ಪ್ರಾಥಮಿಕ ಶಾಲೆ ತೆಗ್ಗಿಹಾಳದಲ್ಲಿ 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಮೂರು ವರ್ಷಗಳ ಕಾಲ ಅರ್ಟಗಲ್ ಕ್ಲಸ್ಟರ್ ಸಿ.ಆರ್.ಪಿ ಯಾಗಿ. ನಿಯೋಜಿತ ಬಿ.ಆರ್.ಪಿ ಯಾಗಿ ಮೂರು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಅವರು ಹಂಪಿಯ ಕನ್ನಡ ವಿ.ವಿ.ಗೆ ಸಂಶೋಧನಾ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಪಡೆದಿದ್ದಾರೆ.  ಕೃತಿಗಳು:  ಸಾವು ಬದುಕಿನ ನಡುವೆ (ಕಥಾ ಸಂಕಲನ) ಸಂಸ್ಕಾರ ಫಲ (ಮಕ್ಕಳ ಕಥಾ ಸಂಕಲನ) ಚರಿತ್ರೆಗೊಂದು ...

READ MORE

Related Books