‘ಪ್ರಶ್ನೆ- ಪ್ರಜ್ಞೆ ಭಾಗ೧’ ಶಾಂತಾರಾಮ ಸೋಮಯಾಜಿ ಅವರ ವೈಚಾರಿಕ ಬರಹಗಳ ಲೇಖನವಾಗಿದೆ. ಪ್ರಶ್ನಿಸುವುದು ಬೌದ್ಧಿಕ - ವೈಚಾರಿಕ ಲಕ್ಷಣವಾದರೆ ಪ್ರಶ್ನೆಗಳನ್ನೆದುರಿಸುವುದಂತೂ ಬುದ್ದಿ ಪ್ರಜ್ಞೆಯನ್ನು ಇನ್ನಷ್ಟು ಹರಿತಗೊಳಿಸಲು ನಮಗೆ ಅವಕಾಶವೊಂದು ಸಿಕ್ಕಿದಂತೆ. ಇಲ್ಲಿನ ಪ್ರಶ್ನೆಗಳು ನಮ್ಮ ಪ್ರಜ್ಞೆಯ ಒಂದು ಭಾಗವಾಗಿರುವ ನಂಬಿಕೆ ಮತ್ತು ಸಿದ್ಧಾಂತದ ಬಗ್ಗೆ ಪ್ರಖರ ಚಿಂತನೆಯನ್ನೂ ಒಳಗೊಂಡಿವೆ.
ಶಾಂತಾರಾಮ ಸೋಮಯಾಜಿ ಅವರು ಲೇಖಕರು. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ...
READ MOREಹೊಸತು-2004- ಎಪ್ರಿಲ್
ಸೋಮಯಾಜಿಯವರು ಸ್ವಾರಸ್ಯಕರವಾದ ಕೆಲವು ಘಟನೆಗಳನ್ನಿಲ್ಲಿ ತಿಳಿಸುತ್ತಾ ಜೊತೆಯಲ್ಲಿಯೇ ನಮಗೆ ಪ್ರಶ್ನೆಗಳ ಚೂಪು ಬಾಣಗಳನ್ನೂ ಎಸೆಯುತ್ತಾರೆ. ಪ್ರಶ್ನಿಸುವುದು ಬೌದ್ಧಿಕ - ವೈಚಾರಿಕ ಲಕ್ಷಣವಾದರೆ ಪ್ರಶ್ನೆಗಳನ್ನೆದುರಿಸುವುದಂತೂ ಬುದ್ದಿ ಪ್ರಜ್ಞೆಯನ್ನು ಇನ್ನಷ್ಟು ಹರಿತಗೊಳಿಸಲು ನಮಗೆ ಅವಕಾಶವೊಂದು ಸಿಕ್ಕಿದಂತೆ. ಇಲ್ಲಿನ ಪ್ರಶ್ನೆಗಳು ನಮ್ಮ ಪ್ರಜ್ಞೆಯ ಒಂದು ಭಾಗವಾಗಿರುವ ನಂಬಿಕೆ ಮತ್ತು ಸಿದ್ಧಾಂತದ ಬಗ್ಗೆ ಪ್ರಖರ ಚಿಂತನೆಯನ್ನೂ ಒಳಗೊಂಡಿವೆ. ಅಸಂಖ್ಯಾತ ಪ್ರಶ್ನೆಗಳೇ ಪ್ರಶ್ನೆಗಳು ! ಬನ್ನಿ, ಓದಿ ಉತ್ತರಗಳಿಗಾಗಿ ಒಂದಷ್ಟು ಚಿಂತಿಸೋಣ.