ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಬರೆದ ಲೇಖನಗಳ ಸಂಕಲನ ‘ಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು ಹಾಗೂ ಇತರ ಲೇಖನಗಳು’. ಪ್ರಸ್ತುತ ಕೃತಿಯು ಜಾತೀಯತೆ ಮತ್ತು ಅಭಿವೃದ್ಧಿ ಸಡಿಲ ಅಡಿಪಾಯದ ಮೇಲೆ ಗಗನಚುಂಬಿ ಕಟ್ಟಡ ಕಟ್ಟುವ ಕನಸು!, ಮಾಧ್ಯಮ-ದ್ವೇಷಿ ಮೋದಿ, ಬಿಜೆಪಿ ಚುನಾವಣಾ ಹಸ್ತಪತ್ರಿಕೆ ಪ್ರಚೋದನೆಗೆ ಕುಮ್ಮಕ್ಕು, ತಜ್ಞರ ನಡುವಿನ ಕಿತ್ತಾಟ ಮತ್ತು ಮುಂದಿನ ಸರ್ಕಾರಕ್ಕೆ ಆರ್ಥಿಕ ಸವಾಲು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ರಾಜ್ಯ ರಾಜ್ಯಗಳ ನಡುವೆ ಘರ್ಷಣೆ, ಮೋದಿಗೆ ನಮ್ಮ ಓಟಿಲ್ಲ, ಕ್ರಾಂತಿ ಅಡಗಿರುವುದು ಸಣ್ಣ ಸಣ್ಣ ಬದಲಾವಣೆಗಳಲ್ಲಿ, ಭ್ರಷ್ಟಗೊಂಡ ರಾಜಕೀಯ ಪಕ್ಷಗಳನ್ನು ಸಿವಿಲ್ ಸೊಸೈಟಿಯೇ ತಿದ್ದಬೇಕು, ರಾಫೆಲ್ ಒಪ್ಪಂದದಲ್ಲಿ ಮೋದಿ ಹಸ್ತಕ್ಷೇಪ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೋರೆಸ್ವಾಮಿ. ಹಾರೋಹಳ್ಳಿಯಲ್ಲಿ ಜನಿಸಿದ ದೊರೆಸ್ವಾಮಿ ತಮ್ಮ 5ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಅಜ್ಜನ ಬಳಿ ಬೆಳೆದ ಅವರು ಹಾರೋಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಮಹಾತ್ಮ ಗಾಂಧಿ ‘ಮೈ ಅರ್ಲಿ ಲೈಫ್’ ಪುಸ್ತಕವನ್ನು ಓದಿ ಅದರಿಂದ ಪ್ರಭಾವಿತರಾದ ದೊರೆಸ್ವಾಮಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿದರು. ಕಾಲೇಜು ಶಿಕ್ಷಣದ ಜೊತೆಗೆ ಸ್ವತಂತ್ರ್ಯ ಹೋರಾಟದಲ್ಲೂ ಭಾಗಿಯಾಗುತ್ತಿದ್ದ ದೊರೆಸ್ವಾಮಿ 1942ರ ಹೊತ್ತಿಗೆ ತಮ್ಮ ಬಿ.ಎಸ್.ಸಿ ಪೂರ್ಣಗೊಳಿಸಿ ಉಪನ್ಯಾಸಕ ವೃತ್ತಿ ಆರಂಭಿಸಿದರು. ಅದೇ ವರ್ಷ ...
READ MORE