ಎಂದೂ ಮುಗಿಯದ ಯುದ್ಧ

Author : ಎನ್. ಜಗದೀಶ್ ಕೊಪ್ಪ

Pages 228

₹ 130.00




Year of Publication: 2019
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

‘ಎಂದೂ ಮುಗಿಯದ ಯುದ್ಧ’ ಭಾರತ ನಕ್ಸಲ್ ಇತಿಹಾಸ ಲೇಖಕ ಜಗದೀಶ್ ಕೊಪ್ಪ ಅವರ ಕೃತಿ. ಇದು ಭಾರತೀಯ ನಕ್ಸಲ್ ಇತಿಹಾಸದ ಸಂಶೋಧನಾತ್ಮಕ ಕೃತಿ. ಈ ಕೃತಿಗಾಗಿ ಲೇಖಕರು ಸಾಕಷ್ಟು ಕ್ಷೇತ್ರಕಾರ್ಯ ಮಾಡಿದ್ದಾರೆ. ಇಲ್ಲಿ ಪುರೋಗಾಮಿ ಪತ್ರಕರ್ತರಾಗಲಿ, ಚರ್ವಿತ ಚರ್ವಣ ಎಡಪಂಥೀಯ ಚಳವಳಿಗಳ ನೇತಾರರಾಗಲಿ ಗಮನಿಸಬೇಕಾದ ಸಂಗತಿಯೆಂದರೆ, ದೇಶದ ವಿಭಿನ್ನ ನೆಲೆಯ ಎರಡು ಯುವಶಕ್ತಿಗಳು ಫ್ಯಾಸಿಸ್ಟ್ ಶಕ್ತಿಗಳಿಗೆ ಬಲಿಯಾಗುತ್ತಿದ್ದಾರೆ ಮತ್ತು ಆ ನಿಟ್ಟಿನಲ್ಲಿ ತಕ್ಷಣವೇ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಬೇಕಾದ ಅಗತ್ಯವಿದೆ ಎಂಬುದನ್ನು ಕೃತಿ ಮನದಟ್ಟುಮಾಡಿಕೊಡುತ್ತದೆ.

ದೇಶದ ನಗರವಾಸಿ ವಿದ್ಯಾವಂತ ಯುವಕರು ಬಂಡವಾಳಶಾಹಿ ಜಗತ್ತು ನಿರ್ಮಿಸಿರುವ ಹುಸಿ ಪ್ರಜಾಸತ್ತೆಯ ಚಳವಳಿಗೆ ಬಲಿಯಾಗಿ ನಿಜವಾದ ಪ್ರತಿಭಟನೆ ಎಲ್ಲಿ, ಯಾಕಾಗಿ ಮಾಡಬೇಕು ಎಂದು ತಿಳಿಯದೆ ದಿಕ್ಕು ತಪ್ಪುತ್ತಿರುವುದು, ಇನ್ನೊಂದೆಡೆ ಗ್ರಾಮೀಣ ಪ್ರದೇಶದಲ್ಲಿರುತ್ತ ವಿದ್ಯೆ-ಉದ್ಯೋಗವಿಲ್ಲದೆ ಹತಾಶರಾಗಿ ಸಂಘ ಪರಿವಾರ, ಭಾಷಾ ಮೂಲಭೂತವಾದ, ಭೂಗತರು ನಡೆಸುವ ಆಟೋ-ಚಾಲಕರ ಇತ್ಯಾದಿ ಸಂಘಟನೆಯಲ್ಲಿ ಗುರುತಿಸಿಕೊಂಡು ಹೊಟ್ಟೆ ಹೊರೆಯುತ್ತಿರುವವರು, ಈ ಎರಡೂ ಯುವಶಕ್ತಿಗೆ ನಿಜವಾದ ಬದಲಾವಣೆ ತರಲು ಸಾಧ್ಯವಿರುವುದು, ಈ ಕಥನ ಅಂತಹ ವಿಚಾರಗಳನ್ನು ಬಿತ್ತಬಲ್ಲದು.

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Awards & Recognitions

Related Books