ಲೇಖಕ ನಿಷ್ಠಿ ರುದ್ರಪ್ಪ ಅವರು ಬರೆದ ಚಿಂತನ ಲೇಖನಗಳ ಬರಹ ಕೃತಿ-ಶಾಶ್ವತರೆಂಬ ಭ್ರಮೆಯಲ್ಲಿ.ಒಟ್ಟು 37 ವಿವಿಧ ವಸ್ತು ವೈವಿಧ್ಯತೆಯ ಚಿಂತನಾ ಬರಹಗಳಿವೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಾನವನ ಅಪರಿಮಿತ ದುರಾಸೆಯನ್ನು ಪ್ರಶ್ನಿಸುತ್ತಲೇ ತಾನು ಶಾಶ್ವತನೆಂಬ ಭ್ರಮೆಯಲ್ಲಿ ಬಿದ್ದು, ತನ್ನ ಅಸ್ಥಿತ್ವಕ್ಕಾಗಿ ಇತರರಿಗೆ ಹೇಗೆ ಮಾರಕನಾಗಿ ಬದುಕುತ್ತಿರುವನೆಂಬುದನ್ನು ತಿಳಿಸುತ್ತಾ, ಮಾನವನ ನಶ್ವರತೆಯನ್ನು ಕಾರ್ಯದ ಶಾಶ್ವತತೆಯನ್ನು ಈ ಕೃತಿಯಲ್ಲಿ ಎತ್ತಿಹಿಡಿಯಲಾಗಿದೆ.
ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...
READ MORE