‘ಕೋಮುಹಿಂಸೆ ನಿಯಂತ್ರಣಾ ಮಸೂದೆ 2011’ ಕೃತಿಯು ಕೋಮುವಾದ ಕುರಿತ ಲೇಖನಗಳನ್ನು ಒಳಗೊಂಡ ಸಂಕಲನವಾಗಿದೆ. ಮೊದಲು ಹೂವಿನಂತಿದ್ದು ಮುಂದೆ ಹಾವಿನಂತೆ ಬದಲಾಗಿ ಒಂದು ಸಂಸಾರದ ನೆಮ್ಮದಿ ಕೆಡಿಸಿದ ಕಥನವನ್ನು ಕೃತಿಯು ಒಳಗೊಂಡಿದೆ. ಈ ದುರಂತಕ್ಕೆ ಮನೆಯವರಷ್ಟೇ ಅಲ್ಲದೆ ಇತರ ಜಾತಿ-ಧರ್ಮಗಳ ಜನರೂ ತಲೆತೂರಿಸಿ ತಮ್ಮ ಮಿತಿಯನ್ನು మిరి ಕೆಡುಕನ್ನುಂಟುಮಾಡುತ್ತಾರೆ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಿಯರೂ ತಮ್ಮಿಚ್ಛೆಯಂತೆ ಬದುಕುವ ಅವಕಾಶ ನೀಡಿದ್ದರೂ ಯಾಕೋ ಸಮಾಜ ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಂತಿಲ್ಲ. ಹಿಂದು-ಮುಸ್ಲಿಂ-ಕ್ರೈಸ್ತ ಮತಾನುಯಾಯಿಗಳು ಪರಸ್ಪರ ಪ್ರೀತಿ-ವಿಶ್ವಾಸ- ಗೌರವಗಳಿಂದ ಬದುಕಿರಬಾರದೆಂಬಂತೆ ಪರಸ್ಪರ ಮನಸ್ಸುಗಳನ್ನು ಅವೇ ಧರ್ಮಗಳ ಮೂಲಭೂತವಾದಿಗಳು ಕೆಡಿಸಿರುತ್ತಾರೆ. ಈ ಸಾಮಾಜಿಕ ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ಸೌಹಾರ್ದತೆಯತ್ತ ಹೆಜ್ಜೆಯಿಡಬೇಕಾದ ಅಗತ್ಯವನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಏರುದಾರಿ ಕಷ್ಟ; ಇಳಿಜಾರು ತುಂಬ ಸುಲಭ. ಆದರೂ ಸಮಾಜ ಮೇಲಿನ ಸ್ತರಕ್ಕೇರಬೇಕು, ಅಧಃಪತನದ ಕಡೆ ಇಳಿಯಬಾರದೆಂಬ ಚೊಕ್ಕ ಸಂದೇಶ ಇಲ್ಲಿದೆ. ವಿವೇಚನಾರಹಿತ ನಿರ್ಧಾರಗಳಿಂದಾಗಿ ಎಲ್ಲೆಂದರಲ್ಲಿ, ಚಿಕ್ಕಪುಟ್ಟ ಕಾರಣಗಳಿಗಾಗಿ ಕೋಮುಗಲಭೆ ಇಂದು ಸಾಮಾನ್ಯ ಎನ್ನುತ್ತದೆ ಈ ಕೃತಿ.
(ಹೊಸತು, ಮೇ 2012, ಪುಸ್ತಕದ ಪರಿಚಯ)
ಇದೊಂದು ಕೌಟುಂಬಿಕ ಚೌಕಟ್ಟಿನೊಳಗೆ ಚಿತ್ರಿಸಲ್ಪಟ್ಟ ದೈನಂದಿನ ಕಷ್ಟ-ಕೋಟಲೆಗಳನ್ನು ತೆರೆದಿಡುವ ಕಾದಂಬರಿ. ಮೊದಲು ಹೂವಿನಂತಿದ್ದು ಮುಂದೆ ಹಾವಿನಂತೆ ಬದಲಾಗಿ ಒಂದು ಸಂಸಾರದ ನೆಮ್ಮದಿ ಕೆಡಿಸಿದ ಕಥನ. ಈ ದುರಂತಕ್ಕೆ ಮನೆಯವರಷ್ಟೇ ಅಲ್ಲದೆ ಇತರ ಜಾತಿ-ಧರ್ಮಗಳ ಜನರೂ ತಲೆತೂರಿಸಿ ತಮ್ಮ ಮಿತಿಯನ್ನು మిరి ಕೆಡುಕನ್ನುಂಟುಮಾಡುತ್ತಾರೆ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಿಯರೂ ತಮ್ಮಿಚ್ಛೆಯಂತೆ ಬದುಕುವ ಅವಕಾಶ ನೀಡಿದ್ದರೂ ಯಾಕೋ ಸಮಾಜ ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಂತಿಲ್ಲ. ಹಿಂದು-ಮುಸ್ಲಿಂ-ಕ್ರೈಸ್ತ ಮತಾನುಯಾಯಿಗಳು ಪರಸ್ಪರ ಪ್ರೀತಿ-ವಿಶ್ವಾಸ- ಗೌರವಗಳಿಂದ ಬದುಕಿರಬಾರದೆಂಬಂತೆ ಪರಸ್ಪರ ಮನಸ್ಸುಗಳನ್ನು ಅವೇ ಧರ್ಮಗಳ ಮೂಲಭೂತವಾದಿಗಳು ಕೆಡಿಸಿರುತ್ತಾರೆ. ಈ ಸಾಮಾಜಿಕ ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ಸೌಹಾರ್ದತೆಯತ್ತ ಹೆಜ್ಜೆಯಿಡಬೇಕಾದ ಅಗತ್ಯವನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಏರುದಾರಿ ಕಷ್ಟ; ಇಳಿಜಾರು ತುಂಬ ಸುಲಭ. ಆದರೂ ಸಮಾಜ ಮೇಲಿನ ಸ್ತರಕ್ಕೇರಬೇಕು, ಅಧಃಪತನದ ಕಡೆ ಇಳಿಯಬಾರದೆಂಬ ಚೊಕ್ಕ ಸಂದೇಶ ಇಲ್ಲಿದೆ. ವಿವೇಚನಾರಹಿತ ನಿರ್ಧಾರಗಳಿಂದಾಗಿ ಎಲ್ಲೆಂದರಲ್ಲಿ, ಚಿಕ್ಕಪುಟ್ಟ ಕಾರಣಗಳಿಗಾಗಿ ಕೋಮುಗಲಭೆ ಇಂದು ಸಾಮಾನ್ಯ. ಇವನ್ನೆಲ್ಲ ನೋಡಿ ಇಂಥ ಅನಾಹುತಗಳಿಗೆ ಮತ್ತು ಸಂತ್ರಸ್ತರಿಗೆ ಮನ ಮಿಡಿಯುವ ಮಾನವೀಯ ಸ್ವಭಾವದ ಲೇಖಕಿ ಸಾರಾ ತಮ್ಮ ಬರಹಗಳ ಮೂಲಕ ನೊಂದ ಮನಸ್ಸುಗಳಿಗೊಂದಿಷ್ಟು ತಂಪೆರೆಯುತ್ತಿದ್ದಾರೆ.
©2024 Book Brahma Private Limited.