ಅಂಗದಲ್ಲಿ ಅಗಮ್ಯ

Author : ಬಿ. ಯು. ಸುಮಾ

Pages 180

₹ 150.00




Year of Publication: 2019
Published by: ಸಿವಿಜಿ ಬುಕ್ಸ್
Address: ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು- 560058

Synopsys

‘ಅಂಗದಲ್ಲಿ ಅಗಮ್ಯ’ ಮಹಿಳೆ: ಬದುಕು ಮತ್ತು ಚಿಂತನೆ ಕೃತಿಯನ್ನು ಲೇಖಕಿ ಬಿ.ಯು.ಸುಮಾ ಅವರು ಸಂಪಾದಿಸಿದ್ದಾರೆ. ಈ ಕೃತಿಗೆ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಸಂವಾದದ ಜತೆ ಒಂದು ರೀತಿಯ ತಾದ್ಯಾತ್ಮ ಸಂಬಂಧ ಹೊಂದಿರುವ ಸುಮಾ ಈ ತಲೆಮಾರಿನ ಶಕ್ತಿಶಾಲಿ ಲೇಖಕಿ, ಅವರ ಅಧ್ಯಯನಶೀಲತೆ, ಸಮಾಜೋ ರಾಜಕೀಯ ತಿಳಿವಳಿಕೆ ಅಗಾಧವಾದುದು ಜಗತ್ತಿನ ಬಹುತೇಕ ಎಲ್ಲಾ ಸೃಜನಶೀಲ ಮತ್ತು ವೈಚಾರಿಕ ಕೃತಿಗಳನ್ನು ಅದರ ಮೂಲ ಸ್ವರೂಪದಲ್ಲೇ ಅರ್ಥೈಸುವ ವ್ಯಾಖ್ಯಾನಿಸುವ ಮತ್ತು ವಿಶ್ಲೇಷಣೆಗೊಳಪಡಿಸುವ ಅಪರೂಪದ ಚಿಂತಕಿ. ತಮ್ಮ ಪ್ರಖರ ಚಿಂತನೆ ಮತ್ತು ಅಧ್ಯಯನಗಳನ್ನು ಒಡೆದು ಹೊಸ ಹೊಳಹುಗಳನ್ನು ಕಟ್ಟಿಕೊಡುವ ಅಪರೂಪದ ಪ್ರತಿಭೆ. ಮಹಿಳೆ ವಿಶೇಷಾಂಕವನ್ನು ಸಂಪಾದಿಸಿಕೊಡುವ ಜವಾಬ್ದಾರಿಯನ್ನು ಅವರು ಅದ್ಭುತವಾಗಿ ನಿರ್ವಹಿಸಿದರು ಸಂವಾದದ ಅಪರೂಪದ ಸಂಗ್ರಹ ಯೋಗ್ಯ ಸಂಚಿಕೆಗಳಲ್ಲಿ ಈ ಕೃತಿ ಮಹತ್ವವಾದದ್ದು’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಬಿ. ಯು. ಸುಮಾ
(07 November 1967)

ಬೆಂಗಳೂರಿನಲ್ಲಿ 1967ರ ನವೆಂಬರ್ 7 ರಂದು ಜನಿಸಿದ ಸುಮಾ ಅವರು ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಭೂಪಸಂದ್ರದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (1990 ಕನ್ನಡ ಎಂ.ಎ.) ಪಡೆದು, 1992 ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಕಣ ಇಲಾಖೆಗೆ ಉಪನ್ಯಾಸಕರಾಗಿ ನೇಮಕ ಹೊಂದಿದರು. 2007ರಲ್ಲಿ 'ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ : 1600-1900' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು. ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2008ರಲ್ಲಿ ಇವರು ಸಂಪಾದಿಸಿದ 'ಡಾ.ಬಿ.ಆರ್.ಅಂಬೇಡ್ಕರ್ -ವರ್ತಮಾನದೊಂದಿಗೆ ...

READ MORE

Related Books