ಲೇಖಕ ರಘೋತ್ತಮ ಹೊ.ಬ ಅವರ ‘ಬಾಬಾ ಸಾಹೇಬರ ಬೆಳಕಿನಲ್ಲಿ’ ಕೃತಿಯು ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗೆಗೆ ಬರೆದ ಅರ್ಥಪೂರ್ಣ ಕೃತಿಯಾಗಿದೆ. ಕೃತಿಗೆ ಮೈಸೂರಿನ ಬಾರುಕೋಲು ಪತ್ರಿಕೆಯ ಸಂಪಾದಕ, ಬಿ.ಆರ್ ರಂಗಸ್ವಾಮಿ ಮುನ್ನುಡಿ ಬರೆದಿದ್ದು,‘ಇದೊಂದು ಚರ್ಚಾರ್ಹ ಲೇಖನಗಳ ಸಂಗ್ರಹವಾಗಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ಸಮಘರ್ಷಗಳ ನಿರಂತರ ಪ್ರಭಾವದಲ್ಲಿರುವ ಲೇಖಕರು ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಚಿಂತನೆಗಳನ್ನು ಬಂಬೇಡ್ಕರ್ ದೃಷ್ಟಿಕೋನದಡಿ ಸತತವಾಗಿ ರೂಪಿಸುತ್ತಾ ಬಂದಿದ್ದಾರೆ’ ಎಂದಿದ್ದಾರೆ. ಲೇಖಕರ ಮಾತುಗಳಲ್ಲಿ, ‘ಬಾಬಾಸಾಹೇಬ್ ಅಂಬೇಡ್ಕರ್ ಈ ದೇಶದ ಭವಿಷ್ಯ ಬದಲಿಸಿದ ಬಹುದೊಡ್ಡ ಶಕ್ತಿ. ಯಾವ ಸ್ಥಾಪಿತ ಹಿತಾಸಕ್ತಿಗಳು ಈ ದೇಶ ಹೀಗೆಯೇ ಇರುತ್ತದೆ ಎಂದು ಕನಸು ಕಂಡಿದ್ದರೋ, ಹಾಗೆಯೇ ಇರಬೇಕು ಎಂದು ವ್ಯವಸ್ಥೆ ರೂಪಿಸಿದ್ದರೋ ಆ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ಸಮಾನತೆಯ ಹೊಸ ಯುಗದತ್ತ ದೇಶವನ್ನು ಕೊಂಡೊಯ್ದ ವೈಚಾರಿಕ ಬೆಳಕು ಬಾಬಾಸಾಹೇಬರು. ವೈಯಕ್ತಿಕವಾಗಿ ನಿತ್ಯ ಬಾಬಾಸಾಹೇಬರ ಆ ಬೆಳಕನ್ನು ಕಣ್ಣುಂಬಿಕೊಳ್ಳುತ್ತಿದ್ದೇನೆ. ಸದಾ ನನ್ನ ಬ್ಯಾಗ್‌ನಲ್ಲಿ ನಗುನಗುತ್ತಾ ಕುಳಿತುಕೊಳ್ಳುವ ಬಾಬಾಸಾಹೇಬರ ಆ ಇಂಗ್ಲಿಷ್ ಸಂಪುಟಗಳ ಪ್ರತಿರೂಪ ನನ್ನೆಲ್ಲ ಕೃತಿಯ ಆ ಲೇಖನಗಳು. ಈ ನಿಟ್ಟಿನಲ್ಲಿ ಅಂತಹ ಲೇಖನಗಳ ಮತ್ತೊಂದು ಗುಚ್ಛ "ಬಾಬಾಸಾಹೇಬರ ಬೆಳಕಿನಲ್ಲಿ...” ಎಂಬ ಶೀರ್ಷಿಕೆಯಲ್ಲಿ ಮತ್ತೊಮ್ಮೆ ನಿಮ್ಮ ಕೈಯಲ್ಲಿದೆ’ ಎಂದಿದ್ದಾರೆ.
©2024 Book Brahma Private Limited.