ಬೆಟ್ಟ ಬಯಲಾದ ಪರಿ- ವೈಚಾರಿಕ ಬರಹಗಳ ಪುಸ್ತಕವಿದು. ಲೇಖಕರು ಡಿ. ರಾಮಣ್ಣ ಅಲ್ಮರ್ಸಿಕೇರಿ. ಶಿಕ್ಷಕರಾಗಿ ವೃತ್ತಿಯಲ್ಲಿಯ ಅನುಭವಗಳು, ಸಮಾಜಮುಖಿ ಹಾಗೂ ರೈತರ ಚಿಂತನೆಯ ಬರಹಗಳು ಒಳಗೊಂಡಿವೆ. ಒಟ್ಟು 13 ಲೇಖನಗಳಿವೆ. ಮಾನವೀಯ ಸ್ಪಂದನೆಯು ಇಲ್ಲಿಯ ಲೇಖನಗಳ ಕೇಂದ್ರವಾಗಿದೆ. ವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯಂತಹ ಸಾಹಿತ್ಯ ಅಂಶಗಳಿಂದ ಇಲ್ಲಿಯ ಲೇಖನಗಳು ಓದುಗರ ಗಮನ ಸೆಳೆಯುತ್ತವೆ.
ಲೇಖಕ ಡಿ. ರಾಮಣ್ಣ ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಲ್ಮರ್ಸಿಕೇರಿ ಗ್ರಾಮದವರು. ಕೊಪ್ಪಳದ ಕಾಳಿದಾಸ ಪ್ರೌಢಶಾಲೆಯಲ್ಲಿ ಶಿಕ್ಷಕರು. . ಕೃತಿಗಳು: ಆರೋಗ್ಯ ಮತ್ತು ನೈರ್ಮಲ್ಯ (ವಿಜ್ಞಾನ ಕಿರುನಾಟಕ), ಕೂರಿಗಿ ತಾಳು. (ಕವನ ಸಂಕಲನ), ಬೆಟ್ಟ ಬಯಲಾದ ಪರಿ (ಲೇಖನಗಳ ಸಂಗ್ರಹ). ...
READ MORE