ಲೇಖಕ ಡಾ. ಮಲ್ಲಿಕಾರ್ಜುನ ಪಿ. ಹುಲ್ಲೆ ಅವರ ಕೃತಿ-ಕೆ.ಎಸ್. ಭಗವಾನ್ ಅವರ ಸಾಹಿತ್ಯ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭಗವಾನ್ ಅವರ ಹೆಸರು ಅಮರ. ಇವರ ಸಾಹಿತ್ಯಕೃಷಿ ಅಮೋಘ. ಕಥೆ,ನಾಟಕ, ವಿಮರ್ಶೆ, ಲೇಖನ ಸಾಹಿತ್ಯ,ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ, ಸಮಾಜದಲ್ಲಿ ಸಮಸ್ಯೆಗಳು ಧರ್ಮ, ಜಾತಿ,ರಾಜಕೀಯ,ಆರ್ಥಿಕತೆ ಮತ್ತು ಐತಿಹಾಸಿಕ ಮುಂತಾದ ಅಂಶಗಳ ಕುರಿತು ಪೂರ್ವಪರ ಹಾಗೂ ಆಧುನಿಕ ವಿಚಾರಗಳನ್ನು ಕುರಿತು ಚಾರಿತ್ರಿಕ ಮತ್ತು ವಿಚಾರ ಸಾಹಿತ್ಯದಲ್ಲಿ ವ್ಯಕ್ತಪಡಿಸಿದ್ದಾರೆ. ಅಳಿದು ಹೋಗುತ್ತಿರುವ ಸಂಸ್ಕೃತಿಯ ಚಿತ್ರಣವನ್ನು ಉಳಿಸಿಕೊಳ್ಳಬೇಕು ಎಂಬ ಹಂಬಲ ಅವರದ್ದು. ತಮ್ಮ ಅನುವಾದ ನಾಟಕಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ವಿವರಿಸುತ್ತಾರೆ. ವಾಸ್ತವವಾಗಿ ಇದು ಭಾರತೀಯ ಸಾಮಾಜಿಕ-ರಾಜಕೀಯ, ಆರ್ಥಿಕ, ಧಾರ್ಮಿಕ,ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ. ಭಗವಾನ್ ಅವರ ಬರಹವು ಯಾವೊಬ್ಬ ಸೃಜನಶೀಲ ಬರಹಗಾರನ ಬರಹಕ್ಕಿಂತ ಕಡಿಮೆಯಾದುದ್ದಲ್ಲ. ಬಳಸುವ ವಾಕ್ಯದ ಬಳಕೆ ನವೀನವಾದ ಪದಪುಂಜ,ರೂಪಕ ಭಾಷೆಯ ರಮ್ಯತೆಗಳು ಇವರ ಬಹರದ ವಿಶೇಷ. ಭಾಷೆಯ ಶೈಲಿಯೂ ಗಡಸು. ದೇಶೀಯತೆಯ ಜೊತೆಗೆ ಗಂಭೀರತೆಯನ್ನು ಉಂಟುಮಾಡಿದೆ. ಕೆ.ಎಸ್. ಭಗವಾನರು ಚಿಂತಕರಾಗಿ,ಸಣ್ಣಕತೆಗಾರರಾಗಿ, ಅನುವಾದಕರಾಗಿ, ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ ವಾಸ್ತವ ಜೀವನದ ಸಮಸ್ಯೆಗಳತ್ತ ಹೆಚ್ಚು ಗಮನ ಹರಿಸಿದ್ದಾರೆ.ಅನ್ಯಾಯದ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದಾರೆ.ಇವರು ಮೂಢನಂಬಿಕೆಗಳನ್ನು ನಂಬಿದವರಲ್ಲ ಮೌಢ್ಯತೆಯನ್ನು ವಿರೋಧಿಸುತ್ತಲೇ ಬಂದವರು.
ಡಾ. ಮಲ್ಲಿಕಾರ್ಜುನ ಹುಲ್ಲೆಯವರು ಭಗವಾನ್ ಅವರ ಸಾಹಿತ್ಯ ಅಧ್ಯಯನ ಕುರಿತು ಪುಸ್ತಕ ರಚಿಸಿರುವುದು ಉತ್ತಮ ಬೆಳವಣಿಗೆಯಲ್ಲದೆ, ಕೆ.ಎಸ್ ಭಗವಾನ್ ಅವರ ಜೀವನ ಮತ್ತು ಸಾಹಿತ್ಯ,ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೆ.ಎಸ್.ಭಗವಾನ್ ಅವರ ವಿಮರ್ಶೆ ಪ್ರಭಾವ,ಕೆ.ಎಸ್.ಭಗವಾನ್ ಅವರ ಅನುವಾದ ಸಾಹಿತ್ಯ ಚಿಂತನೆ, ಕೆ.ಎಸ್. ಭಗವಾನ್ ಅವರ ವೈಚಾರಿಕ ಸಾಹಿತ್ಯ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೆ.ಎಸ್. ಭಗವಾನ್ ಅವರ ಕೊಡುಗೆ, ಹೀಗೆ ಹತ್ತು ಹಲವಾರು ವಿಷಯಗಳನ್ನು ಇಟ್ಟುಕೊಂಡು ಚರ್ಚಿಸಿರುವ ವಿಶಿಷ್ಟ ಕೃತಿ ಇದು.
©2024 Book Brahma Private Limited.